ADVERTISEMENT

ಕನ್ಹಯ್ಯ ಕುಮಾರ್‌ ಸ್ಪರ್ಧೆಗೆ ವಿರೋಧ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಪಿಟಿಐ
Published 29 ಏಪ್ರಿಲ್ 2024, 2:57 IST
Last Updated 29 ಏಪ್ರಿಲ್ 2024, 2:57 IST
<div class="paragraphs"><p>ಕನ್ಹಯ್ಯ ಕುಮಾರ್‌ (ಸಂಗ್ರಹ ಚಿತ್ರ)</p></div>

ಕನ್ಹಯ್ಯ ಕುಮಾರ್‌ (ಸಂಗ್ರಹ ಚಿತ್ರ)

   

ನವದೆಹಲಿ: ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಪಕ್ಷದ ಕಾರ್ಯಕರ್ತರ ಗುಂಪೊಂದು ಭಾನುವಾರ ಪ್ರತಿಭಟನೆ ನಡೆಸಿದೆ.

ಮೌಜ್‌ಪುರ ಮೆಟ್ರೊ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.

ADVERTISEMENT

‘ನಮ್ಮ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿ ಬೇಕು. ಇಲ್ಲದಿದ್ದರೆ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ಹೈಕಮಾಂಡ್‌ ಜೊತೆ ಸಭೆ ನಡೆಸಬೇಕು. ನಮ್ಮ ನಡುವಿನ ಸ್ಥಳೀಯ ಅಭ್ಯರ್ಥಿಯೇ ನಮಗೆ ಬೇಕು. ನಮಗೆ ಹೊರಗಿನವರು ಬೇಡ. ನಮಗೆ ಯಾರ ಜೊತೆಯೂ ಅಸಮಾಧಾನ ಇಲ್ಲ. ನಮ್ಮ ಪ‍್ರತಿಭಟನೆ ಯಾರ ವಿರುದ್ಧವೂ ಅಲ್ಲ. ಹೊರಗಿನ ಅಭ್ಯರ್ಥಿಗಳಿಂದ ಸ್ಥಳೀಯ ರಾಜಕಾರಣ ಕಡೆಗಣಿಸಲಾಗುತ್ತದೆ’ ಎಂದು ಪ್ರತಿಭಟನಾನಿರತರಲ್ಲಿ ಓರ್ವರಾದ ನವದೀಪ್ ಶರ್ಮಾ ಎನ್ನುವವರು ಹೇಳಿದರು.

‘ಈ ಬಗ್ಗೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ ನಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿಲ್ಲ. ನಮಗೆ ಕನ್ಹಯ್ಯ ಕುಮಾರ್ ಇಷ್ಟ ಇಲ್ಲ. ಹೀಗಾಗಿ ನಾವು ಬೀದಿಗೆ ಇಳಿದಿದ್ದೇವೆ’ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದರು.

‘ಹೊರಗಿನವರಿಗೆ ಏನೂ ತಿಳಿದಿಲ್ಲ. ಅವರಿಗೆ ನಮ್ಮ ಬೀದಿಯ ಬಗ್ಗೆಯೂ ಮಾಹಿತಿ ಇಲ್ಲ. ಅವರಿಗೆ ಯಾಕೆ ಟಿಕೆಟ್‌ ಕೊಡಬೇಕು? ನಾವು ಯಾರ ವಿರುದ್ಧವೂ ಅಲ್ಲ. ಇಲ್ಲಿನ ರಸ್ತೆಗಳ ಪರಿಚಯ ಇರುವ, ಸಮಸ್ಯೆಗಳ ಬಗ್ಗೆ ಅರಿವಿರುವ ವ್ಯಕ್ತಿ ನಮಗೆ ಬೇಕು. ಅರವಿಂದರ್‌ ಸಿಂಗ್ ಲೌಲಿ, ಸಂದೀಪ್ ದೀಕ್ಷಿತ್‌ ಮುಂತಾದವರಿಗೆ ಟಿಕೆಟ್‌ ನೀಡಬಹುದಿತ್ತು’ ಎಂದು ಇನ್ನೊಬ್ಬರು ಅಭಿಪ‍್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.