ADVERTISEMENT

ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕೈ ಕಾರ್ಯಕರ್ತರ ಹಲ್ಲೆ 

ಏಜೆನ್ಸೀಸ್
Published 7 ಏಪ್ರಿಲ್ 2019, 8:27 IST
Last Updated 7 ಏಪ್ರಿಲ್ 2019, 8:27 IST
   

ವಿರುದುನಗರ್‌: ತಮಿಳುನಾಡಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೊ ತೆಗೆದ ಅಲ್ಲಿನ ವಾರ ಪತ್ರಿಕೆಯೊಂದರ ಛಾಯಾಗ್ರಾಹಕನ ಮೇಲೆ ಕೈ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.

ವಿರುಧುನಗರ ಜಿಲ್ಲೆಯಲ್ಲಿ ಶನಿವಾರ ಕಾಂಗ್ರೆಸ್‌ ಸಮಾವೇಶ ಆಯೋಜನೆಗೊಂಡಿತ್ತು. ಈ ಸಮಾವೇಶದ ಅಧ್ಯಕ್ಷತೆಯನ್ನು ತಮಿಳುನಾಡು ಪ್ರದೇಶ ಕಾಂಗ್ರೆಸ್‌ನಅಧ್ಯಕ್ಷ ಕೆ.ಎಸ್‌. ಅಳಗಿರಿವಹಿಸಿಕೊಂಡಿದ್ದರು. ಈ ಸಮಾವೇಶದಲ್ಲಿ ಖಾಲಿ ಕುರ್ಚಿಗಳಿರುವ ಕಡೆಛಾಯಾಗ್ರಾಹಕ ಆರ್‌.ಎಂ ಮುತ್ತುರಾಜ್‌ ಅವರು ಚಿತ್ರ ಸೆರೆ ಹಿಡಿಯುತ್ತಿದ್ದರು. ಆಗ ಕಾಂಗ್ರೆಸ್‌ ಕಾರ್ಯಕರ್ತರುದಾಳಿ ನಡೆಸಿದ್ದಾರೆ. ಅಲ್ಲದೆ, ಮುತ್ತುರಾಜ್‌ ಅವರ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲ ಪತ್ರಕರ್ತರು ಮಧ್ಯಪ್ರವೇಶ ಮಾಡಿ ಮುತ್ತುರಾಜ್‌ ಅವರಿಗೆ ನೆರವಾಗಿದ್ದಾರೆ.ಈ ದೃಶ್ಯಾವಳಿ ಸದ್ಯ ತಮಿಳುನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟನೆ ನಂತರ ಛಾಯಾಗ್ರಾಹಕ ಮುತ್ತುರಾಜ್‌ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬೆಳವಣಿಗೆಖಂಡಿಸಿರುವ ಬಿಜೆಪಿ, ‘ಕಾಂಗ್ರೆಸ್‌ನದ್ದು ಗೂಂಡಾ ಸಂಸ್ಕೃತಿ,’ಎಂದು ಟೀಕಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.