ADVERTISEMENT

ಮಹಾರಾಷ್ಟ್ರ ವಿಧಾನಸಭೆಗೆ ‘ಮಹಾಯುತಿ’ ತಯಾರಿ: 230 ಕ್ಷೇತ್ರಗಳ ಸೀಟು ಹಂಚಿಕೆ ಪೂರ್ಣ

ಪಿಟಿಐ
Published 14 ಅಕ್ಟೋಬರ್ 2024, 16:32 IST
Last Updated 14 ಅಕ್ಟೋಬರ್ 2024, 16:32 IST
ಪ್ರಫುಲ್‌ ಪಟೇಲ್‌
ಪ್ರಫುಲ್‌ ಪಟೇಲ್‌   

ಮುಂಬೈ: ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ, ‘ಮಹಾ ಯುತಿ’ ಮೈತ್ರಿಕೂಟವು 230 ಕ್ಷೇತ್ರಗಳ ಸೀಟು ಹಂಚಿಕೆ ವಿಚಾರವಾಗಿ ಒಮ್ಮತಕ್ಕೆ ಬಂದಿದೆ ಎಂದು ಎನ್‌ಸಿಪಿ ಹಿರಿಯ ನಾಯಕ ಪ್ರಫುಲ್‌ ಪಟೇಲ್‌ ಸೋಮವಾರ ಹೇಳಿದ್ದಾರೆ.

225ರಿಂದ 235 ಕ್ಷೇತ್ರಗಳ ಕ್ಷೇತ್ರಗಳ ಸೀಟು ಹಂಚಿಕೆ ಇತ್ಯರ್ಥವಾಗಿದೆ. ಉಳಿದ ಕ್ಷೇತ್ರಗಳ ಹಂಚಿಕೆ ಅಂತಿಮಗೊಂಡ ನಂತರ, ಶೀಘ್ರವೇ ಈ ಬಗ್ಗೆ ತಿಳಿಸಲಾಗುವುದು ಎಂದು ಪಟೇಲ್‌ ಅವರು ತಿಳಿಸಿದ್ದಾರೆ.

‘ಮಹಾ ಯುತಿ’ ಮೈತ್ರಿಕೂಟದಲ್ಲಿ ಬಿರುಕು ಮೂಡಿದ್ದು, ಎನ್‌ಸಿಪಿ ಶೀಘ್ರ ಹೊರಬರಲಿದೆ ಎಂಬ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಶನಿವಾರ ತೆರೆ ಎಳೆದಿದ್ದರು. ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿದೆ ಎಂದು ಪ್ರತಿಕ್ರಿಯಿಸಿದ್ದರು. ಸೀಟು ಹಂಚಿಕೆ ಶೇ 90ರಷ್ಟು ಮುಕ್ತಾಯಗೊಂಡಿದೆ. ಉಳಿದ ಕ್ಷೇತ್ರಗಳ ಹಂಚಿಕೆಯೂ ಶೀಘ್ರ ಅಂತಿಮಗೊಳ್ಳಲಿದೆ ಎಂದು ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವನಕುಳೆ ತಿಳಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.