ADVERTISEMENT

ಬ್ಯಾಗ್‌ ಕಳ್ಳತನ ಪ್ರಕರಣ | ರೈಲ್ವೆ ಇಲಾಖೆಗೆ 1 ಲಕ್ಷ ದಂಡ ವಿಧಿಸಿದ ಗ್ರಾಹಕ ಆಯೋಗ

ಪಿಟಿಐ
Published 24 ಜೂನ್ 2024, 15:49 IST
Last Updated 24 ಜೂನ್ 2024, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಯಾಣಿಕರೊಬ್ಬರ ಬ್ಯಾಗ್‌ ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ರೈಲ್ವೆಗೆ ಗ್ರಾಹಕ ಆಯೋಗವು  ₹1.08 ಲಕ್ಷ ದಂಡ ವಿಧಿಸಿದೆ.

2016ರ ಜನವರಿ ತಿಂಗಳಲ್ಲಿ ಮಾಲ್ವ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರ ಬ್ಯಾಗ್‌ ಝಾನ್ಸಿ– ಗ್ವಾಲಿಯರ್‌ ಮಧ್ಯೆ ಕಳ್ಳತನವಾಗಿತ್ತು. ಅದರಲ್ಲಿ ₹80 ಸಾವಿರ ಮೌಲ್ಯದ ವಸ್ತುಗಳಿದ್ದವು. ಈ ಬಗ್ಗೆ ಅವರು ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗವು, ‘ತನ್ನ ವಸ್ತುಗಳ ಕಳ್ಳತನವಾಗಿರುವ ಬಗ್ಗೆ ದೂರುದಾರರು ರೈಲ್ವೆಗೆ ದೂರು ನೀಡಲು ಪ್ರಯತ್ನಿಸಿದ್ದರು. ಆದರೆ ಅವರು ಸಾಕಷ್ಟು ಮಾನಸಿಕ ವೇದನೆ ಅನುಭವಿಸಿದ್ದಾರೆ. ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ’ ಎಂದು ತಿಳಿಸಿದೆ.  

‘ಪ್ರಯಾಣಿಕರ ವಸ್ತುಗಳ ಸುರಕ್ಷತೆ ಬಗ್ಗೆ ಗಮನಹರಿಸದ ರೈಲ್ವೇ ಇಲಾಖೆಯು, ದೂರುದಾರರು ಕಳೆದುಕೊಂಡಿರುವ ವಸ್ತುಗಳ ಮೌಲ್ಯ ₹80 ಸಾವಿರದ ಜೊತೆಗೆ ಅವರು ಅನುಭವಿಸಿರುವ ಮಾನಸಿಕ ವೇದನೆಗೆ ಪರಿಹಾರವಾಗಿ ₹20 ಸಾವಿರ ಮತ್ತು  ₹8 ಸಾವಿರ ದಾವೆ ವೆಚ್ಚವನ್ನು ಪಾವತಿಸಬೇಕು’ ಎಂದು ಆಯೋಗ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.