ADVERTISEMENT

ಖಾತೆ ರಹಿತ ಸಚಿವರಾಗಿ ಸೆಂಥಿಲ್‌ ಬಾಲಾಜಿ: ಉದ್ದೇಶ ಈಡೇರದು ಎಂದ ಮದ್ರಾಸ್ ಕೋರ್ಟ್

ಪಿಟಿಐ
Published 5 ಸೆಪ್ಟೆಂಬರ್ 2023, 15:51 IST
Last Updated 5 ಸೆಪ್ಟೆಂಬರ್ 2023, 15:51 IST
<div class="paragraphs"><p>ಮದ್ರಾಸ್ ಹೈಕೋರ್ಟ್</p></div>

ಮದ್ರಾಸ್ ಹೈಕೋರ್ಟ್

   

ಚೆನ್ನೈ : ‘ಎಂ.ಕೆ.ಸ್ಟಾಲಿನ್‌ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ವಿ.ಸೆಂಥಿಲ್‌ ಬಾಲಾಜಿ ಅವರು ಖಾತೆ ರಹಿತ ಸಚಿವರಾಗಿ ಮುಂದುವರಿಯುವುದರಲ್ಲಿ ಯಾವುದೇ ಉದ್ದೇಶ ಈಡೇರುವುದಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಇದ್ದು, ಸ್ವಚ್ಛ ಹಾಗೂ ಉತ್ತಮ ಆಡಳಿತದ ಚಿಂತನೆಗೂ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ವಿ.ಗಂಗಾಪುರ್‌ವಾಲಾ ಮತ್ತು ನ್ಯಾಯಮೂರ್ತಿ ಪಿ.ಡಿ.ಆದಿಕೇಶವಲು ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಇಬ್ಬರು ವಕೀಲರು, ಎಐಎಡಿಎಂಕೆ ಮಾಜಿ ಸಂಸದ ಡಾ.ಜೆ.ಜಯವರ್ಧನ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

ADVERTISEMENT

ಸೆಂಥಿಲ್‌ ಬಾಲಾಜಿ ಖಾತೆರಹಿತ ಸಚಿವರಾಗಿರುವ ಕ್ರಮಬದ್ಧತೆ ಪ್ರಶ್ನಿಸಿ ಜಯವರ್ಧನ, ವಕೀಲ ರಾಮಚಂದ್ರನ್‌ ಅರ್ಜಿ ಸಲ್ಲಿಸಿದ್ದರು. ವಕೀಲ ಎಂ.ಎಲ್.ರವಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸಚಿವ ಸ್ಥಾನದಿಂದ ಸೆಂಥಿಲ್‌ ಅವರನ್ನು ವಜಾಮಾಡಿ, ಸದ್ಯ ಯಥಾಸ್ಥಿತಿಯಲ್ಲಿಸಿರುವ ರಾಜ್ಯಪಾಲರ ಆದೇಶವನ್ನು ರದ್ದುಪಡಿಸಲು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.