ತ್ರಿಶ್ಶೂರ್ (ಕೇರಳ): ಇಲ್ಲಿನ ಶ್ರೀ ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ ಶಬರಿಮಲೆ ಅಯ್ಯಪ್ಪನನ್ನು ಚಿತ್ರಿಸಿರುವ ಪೋಸ್ಟರ್ ವಿವಾದಕ್ಕೀಡಾಗಿದೆ.
ಸೋಮವಾರ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಆಯೋಜಿಸಿತ್ತು.ಈ ಕಾರ್ಯಕ್ರಮದಲ್ಲಿ ಇತರ ಫಲಕಗಳ ಜತೆ ಅಯ್ಯಪ್ಪನನ್ನುಅಸಭ್ಯ ರೀತಿಯಲ್ಲಿ ಚಿತ್ರಿಸಿರುವ ಪೋಸ್ಟರ್ ಕಾಣಿಸಿಕೊಂಡಿತ್ತು.
ಹೆಣ್ಣೊಬ್ಬಳ ಕಾಲುಗಳ ನಡುವೆ ರಕ್ತಹರಿಯುತ್ತಿದ್ದು, ಅಲ್ಲಿಅಯ್ಯಪ್ಪ ತಲೆಕೆಳಗಾಗಿರುವ (ಮಗುವಿನ ಹೆರಿಗೆ ನಡೆಯುತ್ತಿರುವ ರೀತಿಯಲ್ಲಿರುವ) ಪೋಸ್ಟರ್ ಅದಾಗಿತ್ತು. ಬೆಳಗ್ಗೆ 9 ಗಂಟೆಗೆ ಈ ಪೋಸ್ಟರ್ ಕಾಣಿಸಿಕೊಂಡಿದ್ದು, ಹತ್ತು ಗಂಟೆಯ ಹೊತ್ತಿಗೆ ಎಸ್‌ಎಫ್‍ಐ ಕಾರ್ಯಕರ್ತರು ಅದನ್ನು ತೆಗೆದು ಹಾಕಿದ್ದಾರೆ.
ಈ ಪೋಸ್ಟರ್ ಕೆಳಗೆ ಎಸ್‌ಎಫ್‌ಐ ಎಂದು ಬರೆದಿದ್ದು, ಎಸ್‌ಎಫ್‌ಐ ಸಂಘಟನೆಯೇ ಇದನ್ನು ಚಿತ್ರಿಸಿದೆ ಎಂಬ ಆರೋಪಗಳಿವೆ. ಆದರೆ ಈ ಪೋಸ್ಟರ್ ನಾವು ಇಟ್ಟದಲ್ಲ, ವಿವಾದಿತ ಚಿತ್ರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ವಿರೋಧಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಎಸ್‌ಎಫ್‌ಐ ಯೂನಿಟ್ ಕಾರ್ಯದರ್ಶಿಹೇಳಿದ್ದಾರೆ.
ಒಂದು ಧರ್ಮವನ್ನೋ ಅಥವಾ ವ್ಯಕ್ತಿಯನ್ನೋ ತಪ್ಪಾದ ರೀತಿಯಲ್ಲಿ ಚಿತ್ರಿಸುವುದು ಎಸ್‌ಎಫ್‌ಐಯ ನೀತಿಯಲ್ಲ.ಈ ರೀತಿ ಮಿಥ್ಯಾರೋಪಗಳನ್ನು ನಂಬಬೇಡಿ.ಇಂತಾ ವಿಷಯಗಳ ಬಗ್ಗೆ ಜಾಗರೂಕರಾಗಿರಿಎಂದು ಎಸ್‌ಎಫ್‌ಐ ತ್ರಿಶ್ಶೂರ್ ಏರಿಯಾ ಕಮಿಟಿ ಪ್ರತಿಕ್ರಿಯಿಸಿದೆ.
ಅಯ್ಯಪ್ಪ ಮಾತ್ರವಲ್ಲದೆ ಶಿವನ ಪೋಸ್ಟರ್ ಕೂಡಾ ಇದೇ ಕಾಲೇಜಿನಲ್ಲಿ ಇತ್ತು ಎಂಬ ವಿಡಿಯೊ, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪೋಸ್ಟರ್ ಪ್ರಕರಣಕ್ಕೆಸಂಬಂಧಿಸಿ ಎಸ್‌ಎಫ್‌ಐ ವಿರುದ್ಧ ಘೋಷಣೆ ಕೂಗಿದ ಬಿಜೆಪಿ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕೊಚ್ಚಿ ದೇವಸ್ವಂ ಮಂಡಳಿ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.