ADVERTISEMENT

ರಾಜಸ್ಥಾನ | ಚುನಾವಣಾಧಿಕಾರಿಗೆ ಕಪಾಳ ಮೋಕ್ಷ: ಪಕ್ಷೇತರ ಅಭ್ಯರ್ಥಿಯ ಬಂಧನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:37 IST
Last Updated 14 ನವೆಂಬರ್ 2024, 7:37 IST
<div class="paragraphs"><p>ಚುನಾವಣಾಧಿಕಾರಿಗೆ ಕಪಾಳ ಮೋಕ್ಷ</p></div>

ಚುನಾವಣಾಧಿಕಾರಿಗೆ ಕಪಾಳ ಮೋಕ್ಷ

   

(ಚಿತ್ರ ಕೃಪೆ–X)

ಜೈಪುರ: ಮತದಾನದ ವೇಳೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಪಾಳಕ್ಕೆ ಹೊಡೆದ ಆರೋಪ ಮೇಲೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ರಾಜಸ್ಥಾನದ ಉಪ ಚುನಾವಣೆ ಮತದಾನದ ವೇಳೆ ಡಿಯೋಲಿ-ಉನಿಯಾರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರು, ಚುನಾವಣಾ ನಿಯಮಗಳನ್ನು ಮೇಲ್ವಿಚಾರಣೆ ಮಾಡಲು ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೀನಾ ಅವರು, ಚುನಾವಣಾಧಿಕಾರಿ ಮೂವರನ್ನು ಬಳಿಸಿಕೊಂಡು ಮತ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.