ಅಹಮದಾಬಾದ್: ಗುಜರಾತ್‌ನ ಕಛ್ ಹಾಗೂ ಪೋರ್‌ಬಂದರ್ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ ₹40 ಕೋಟಿ ಮೌಲ್ಯದ 87 ಪ್ಯಾಕೆಟ್ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪೈಕಿ ಕಛ್ ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹40 ಕೋಟಿ ಹೆಚ್ಚು ಮೌಲ್ಯದ 81 ಚರಸ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಸೋಮವಾರ ಮಾತ್ರ, 40 ಪ್ಯಾಕೆಟ್ ವಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಗದೊಂದು ಪ್ರಕರಣದಲ್ಲಿ ಪೋರ್‌ಬಂದರ್‌ನ ಪೊಲೀಸರು, ಓಡಾದರ್ ತೀರ ಪ್ರದೇಶದಿಂದ ಆರು ಪ್ಯಾಕೆಟ್ ಚರಸ್ ವಶಪಡಿಸಿದ್ದಾರೆ.
ಡ್ರೋನ್ ಹಾಗೂ ಗುಪ್ತಚರ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಕಳೆದ ಕೆಲವು ದಿನಗಳಲ್ಲಿ ಕಛ್, ದೇವಭೂಮಿ ದ್ವಾರಕಾ ಹಾಗೂ ಪೋರ್‌ಬಂದರ್‌ನಲ್ಲಿ 200ಕ್ಕೂ ಹೆಚ್ಚು ಡ್ರಗ್ಸ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ 10 ದಿನಗಳಲ್ಲಿ ದೇವಭೂಮಿ ದ್ವಾರಕಾದಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ₹62 ಕೋಟಿ ಮೌಲ್ಯದ 115 ಪ್ಯಾಕೇಟ್ ಚರಸ್ (124 ಕೆ.ಜಿ) ವಶಪಡಿಸಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.