ADVERTISEMENT

ಉಗ್ರ ಕಸಬ್‌ನನ್ನು ಸೆರೆಹಿಡಿದಿದ್ದ ಪೊಲೀಸರಿಗೆ ಬಡ್ತಿ

ಪಿಟಿಐ
Published 29 ಮಾರ್ಚ್ 2022, 20:01 IST
Last Updated 29 ಮಾರ್ಚ್ 2022, 20:01 IST
ಕಸಾಬ್‌
ಕಸಾಬ್‌   

ಮುಂಬೈ: ಮುಂಬೈ ಭಯೋತ್ಪಾದನಾ ದಾಳಿ (26/11) ಸಂದರ್ಭದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್‌ ಅಜ್ಮಲ್‌ ಕಸಬ್‌ನನ್ನು ಜೀವಂತವಾಗಿ ಸೆರೆ ಹಿಡಿದ ಪೊಲೀಸ್‌ ಸಿಬ್ಬಂದಿಗೆ 2008ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಈ ಕೆಚ್ಚೆದೆಯ ಪೊಲೀಸರು ಪದಕಗಳು, ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳನ್ನು ಹೇರಳವಾಗಿ ಪಡೆದಿದ್ದಾರೆ. ಆದರೆ ಅವರಿಗೆ ಬಡ್ತಿ ದೊರೆತಿರಲಿಲ್ಲ. ಹೀಗಾಗಿ ಅವರಿಗೆ ಒಂದು ಹಂತದ ಬಡ್ತಿ ನೀಡಲು ಸರ್ಕಾರ ಮಾರ್ಚ್‌ 22ರಂದು ನಿರ್ಧರಿಸಿ ಆದೇಶಿಸಿದೆ ಎಂದು ಅವರು ಹೇಳಿದರು.

ಬಡ್ತಿ ಪಡೆದ ಪೊಲೀಸರಿಗೆ ₹2 ಲಕ್ಷದಿಂದ ₹8 ಲಕ್ಷದವರೆಗೆ ಹಣಕಾಸಿನ ಪ್ರಯೋಜನ ಸಿಗಲಿದೆ. 15 ಮಂದಿಗೆ ಇದರ ಪ್ರಯೋಜನ ಸಿಗಲಿದೆ. ಈಗಾಗಲೇ 8 ಮಂದಿ ನಿವೃತ್ತರಾಗಿದ್ದಾರೆ. ಕಸಬ್‌ನನ್ನು ಸೆರೆ ಹಿಡಿಯವ ವೇಳೆ ಎಎಸ್‌ಐ ತುಕಾರಾಂ ಓಂಬಳೆ ಮೃತಪಟ್ಟಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.