ADVERTISEMENT

ಭಾರತಕ್ಕೆ ಬಂದ ಕೊರೊನಾ: ಕೇರಳದಲ್ಲಿ ಮೊದಲ ಪ್ರಕರಣ, ಕರ್ನಾಟಕದಲ್ಲಿ ಕಟ್ಟೆಚ್ಚರ

ಏಜೆನ್ಸೀಸ್
Published 30 ಜನವರಿ 2020, 9:08 IST
Last Updated 30 ಜನವರಿ 2020, 9:08 IST
   

ನವದೆಹಲಿ: ಕೊರೊನಾ ವೈರಸ್ ಭಾರತಕ್ಕೂ ಹರಡಿದ್ದು, ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.

ಕೇರಳದಿಂದ ವುಹಾನ್ ನಗರಕ್ಕೆ ವ್ಯಾಸಂಗಕ್ಕೆಂದು ತೆರಳಿದ್ದ ವಿದ್ಯಾರ್ಥಿ, ಕೊರೊನಾ ವೈರಸ್‌‌ನಿಂದ ವುಹಾನ್ ಅಸ್ತವ್ಯಸ್ತಗೊಂಡ ಕಾರಣ ತಾಯ್ನಾಡಿಗೆ ಮರಳಿದ್ದರು. ಇಲ್ಲಿಗೆ ಬಂದ ಕೂಡಲೆ ಅನಾರೋಗ್ಯಪೀಡಿತರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಎಲ್ಲಾ ರೀತಿಯ ತಪಾಸಣೆಗಳನ್ನು ನಡೆಸಿದಾಗ ಕೊರೊನಾ ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ರೋಗಪೀಡಿತ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ರೋಗಿಯ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ಕೇರಳದಲ್ಲಿ ಈ ಪ್ರಕರಣ ಪತ್ತೆಯಾಗಿರುವುದರಿಂದ ಕರ್ನಾಟಕದ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ನಡುವೆ ಸಂಚರಿಸುವ ಬಸ್ಸುಗಳು ಹಾಗೂ ವಿಮಾನಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ಚೀನಾದಲ್ಲಿ ಇದುವರೆಗೂ 170 ಮಂದಿ ಮೃತಪಟ್ಟಿದ್ದು, 1700 ಮಂದಿಗೆ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದಾರೆ. ಚೀನಾದ ದುಬೇ ನಗರ ಒಂದರಲ್ಲೇ 37 ರಿಂದ 38 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.