ADVERTISEMENT

ಮುಂಬೈಯಲ್ಲಿ ಇಬ್ಬರಿಗೆ ಕೊರೊನಾ ವೈರಸ್‌ ಶಂಕೆ: ಪ್ರತ್ಯೇಕ ವಾರ್ಡ್‌ನಲ್ಲಿ ನಿಗಾ

ಪಿಟಿಐ
Published 29 ಜನವರಿ 2020, 5:29 IST
Last Updated 29 ಜನವರಿ 2020, 5:29 IST
ಕೊರೊನಾ ವೈರಸ್‌ ಸೋಂಕು ತಗುಲಿರುವವರ ತಪಾಸಣೆ –ಪಿಟಿಐ ಸಂಗ್ರಹ ಚಿತ್ರ
ಕೊರೊನಾ ವೈರಸ್‌ ಸೋಂಕು ತಗುಲಿರುವವರ ತಪಾಸಣೆ –ಪಿಟಿಐ ಸಂಗ್ರಹ ಚಿತ್ರ   

ಮುಂಬೈ:ಚೀನಾದಿಂದ ವಾಪಸಾದ ಇಬ್ಬರಿಗೆಕೊರೊನಾ ವೈರಸ್‌ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರನ್ನೂ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 19ರ ಬಳಿಕ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 1,789 ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ (thermal screening) ಒಳಪಡಿಸಲಾಗಿದೆ. ಆ ಪೈಕಿ ಚೀನಾದಿಂದ ಬಂದ ಇಬ್ಬರನ್ನು ಚಿಂಚ್‌ಪೋಕಲಿಯ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈವರೆಗೆ ಯಾವ ಪ್ರಯಾಣಿಕರಲ್ಲಿಯೂ, ಚೀನಾದ ವುಹಾನ್ ನಗರಕ್ಕೆ 14 ದಿನ ಹಿಂದೆ ಭೇಟಿ ನೀಡಿದ್ದವರಲ್ಲಿಯೂ ಕೊರೊನಾ ವೈರಸ್ ಇರುವುದು ಥರ್ಮಲ್ ಸ್ಕ್ಯಾನಿಂಗ್ ವೇಳೆ ಕಂಡುಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಚೀನಾದ ಹುಬೆಯಿ ಪ್ರಾಂತ್ಯದ ವುಹಾನ್‌ ನಗರದಲ್ಲಿ ಕೊರೊನಾ ವೈರಸ್ ಮೊದಲು ಪತ್ತೆಯಾಗಿತ್ತು.

ಚೀನಾದಲ್ಲಿಕೊರೊನಾ ವೈರಸ್ ಪತ್ತೆಯಾದ ಬಗ್ಗೆ ವರದಿಯಾದ ಬೆನ್ನಲ್ಲೇ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲು ಬೃಹನ್ಮುಂಬೈ ಕಾರ್ಪೊರೇಷನ್ (ಬಿಂಎಸಿ) ಸೂಚಿಸಿತ್ತು.

‘ಕೊರೊನಾ ವೈರಸ್ ತಗುಲಿರುವ ಶಂಕೆಯುಳ್ಳ ವ್ಯಕ್ತಿಗಳ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ ಆರಂಭಿಸಲಾಗಿದೆ.ಶೀತ ಮತ್ತು ಕಫಸಂಬಂಧಿ ತೊಂದರೆಯಿಂದಬಳಲುತ್ತಿರುವ ಇಬ್ಬರನ್ನು ವಾರ್ಡ್‌ನಲ್ಲಿರಿಸಿ ಅವರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಬಿಎಂಸಿಯ ಕಾರ್ಯನಿರ್ವಾಹಕ ಆರೋಗ್ಯಾಧಿಕಾರಿ ಡಾ. ಪದ್ಮಜಾ ಕೇಸ್ಕರ್ ತಿಳಿಸಿದ್ದಾರೆ.

ಅದೇ ರೀತಿ ಚೀನಾದಿಂದ ಬರುವ ಪ್ರಯಾಣಿಕರನ್ನು ಪ್ರತ್ಯೇಕ ವಾರ್ಡ್‌ಗೆ ಕಳುಹಿಸುವಂತೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವೈದ್ಯರಿಗೆ ಸೂಚಿಸಲಾಗಿದೆ. ನಗರದಲ್ಲಿರುವ ಎಲ್ಲ ಖಾಸಗಿ ವೈದ್ಯರಿಗೂ ಜಾಗೃತರಾಗಿರಲು ಸೂಚಿಸಲಾಗಿದೆ’ ಎಂದು ಕೇಸ್ಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.