ADVERTISEMENT

‘ಸಮೃದ್ಧಿ ಕಾರಿಡಾರ್’ ಯೋಜನೆಯಲ್ಲಿ ಭ್ರಷ್ಟಾಚಾರ: ನಾನಾ ಪಟೋಲೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:01 IST
Last Updated 11 ಜುಲೈ 2024, 16:01 IST
ನಾನಾ ಪಟೋಲೆ
ನಾನಾ ಪಟೋಲೆ   

ಮುಂಬೈ: ‘ಸಮೃದ್ಧಿ ಕಾರಿಡಾರ್’ ನಿರ್ಮಾಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದ್ದು, ಹೆದ್ದಾರಿಯಲ್ಲಿ ಒಂದೇ ವರ್ಷದೊಳಗೆ ಬಿರುಕುಗಳು ಕಾಣಿಸಿಕೊಂಡಿವೆ ಎಂದಿದ್ದಾರೆ. ಇದೇ ವಿಚಾರದಲ್ಲಿ ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟದ ವಿರುದ್ಧ ಹರಿಹಾಯ್ದಿದ್ದಾರೆ.

‘ಮುಂಬೈ– ನಾಗ್ಪುರ ಸಂಪರ್ಕ ಕಲ್ಪಿಸುವ ಸಮೃದ್ಧಿ ಮಹಾಮಾರ್ಗ ನಿರ್ಮಾಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಈ ಹೆದ್ದಾರಿಯನ್ನು ₹55 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿ ಕಾರಣ ಒಂದೇ ವರ್ಷದಲ್ಲಿ ಹೆದ್ದಾರಿಯಲ್ಲಿ ಬಿರುಕು ಬಿಟ್ಟಿದೆ’ ಎಂದು ಗುರುವಾರ ಹೇಳಿದ್ದಾರೆ.

‘ಸಮೃದ್ಧಿ ಮಹಾಮಾರ್ಗದಿಂದ ಆಡಳಿತ ಪಕ್ಷದವರಿಗೆ ಮಾತ್ರ ಏಳಿಗೆ ಉಂಟಾಗಿದೆ. ಈ ಮಾರ್ಗದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ‘ಸಾವಿನ ಹೆದ್ದಾರಿ’ ಎಂಬ ಹೆಸರನ್ನೂ ಪಡೆದಿಕೊಂಡಿದೆ’ ಎಂದಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ. ಸಮೃದ್ಧಿ ಮಹಾಮಾರ್ಗದಂತೆ, ಮುಂಬೈ– ನವೀ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ₹ 18 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಟಲ್‌ ಸೇತುವಲ್ಲಿ ಬಿರುಕು ಮೂಡಿರುವುದನ್ನೂ ನಾವು ಬಯಲು ಮಾಡಿದ್ದೇವೆ. ಸಮೃದ್ದಿ ಮಹಾಮಾರ್ಗ ಮತ್ತು ಅಟಲ್‌ ಸೇತುವಲ್ಲಿ ಮೂಡಿರುವ ಬಿರುಕು, ಮೋದಿ ಅವರ ಗ್ಯಾರಂಟಿ ಎಷ್ಟರಮಟ್ಟಿಗೆ ವಿಶ್ವಾಸಾರ್ಹವಲ್ಲ ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.