ADVERTISEMENT

ದೇಗುಲ ಭೇಟಿಗೆ ಸಿಗದ ಅವಕಾಶ: ಮೋದಿ ಬೇಸರ

ಪಿಟಿಐ
Published 14 ಫೆಬ್ರುವರಿ 2022, 19:45 IST
Last Updated 14 ಫೆಬ್ರುವರಿ 2022, 19:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಜಲಂಧರ್: ಪಂಜಾಬ್‌ನ ಜಲಂಧರ್‌ನಲ್ಲಿ ಸ್ಥಳೀಯ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ, ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಇದು ಪಂಜಾಬ್‌ ಸರ್ಕಾರದ ಸ್ಥಿತಿಯನ್ನು ಬಿಂಬಿಸುತ್ತದೆ ಎಂದಿರುವ ಪ್ರಧಾನಿ, ಮತ್ತೊಮ್ಮೆ ಜಲಂಧರ್‌ಗೆ ತೆರಳಿ, ದೇವಿ ತಲಾಬ್ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಭದ್ರತಾ ಲೋಪದಿಂದಾಗಿ ಕಳೆದ ತಿಂಗಳು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಸಾಗಿದ್ದ ಅವರು, ಜನವರಿ 5ರ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ಯುವರಾಜನಿಂದ ಹೆಲಿಕಾಪ್ಟರ್‌ಗೆ ತಡೆ:
‘2014ರ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ನಾನು ಪಠಾಣ್‌ಕೋಟ್‌ಗೆ ಹೋಗಿದ್ದೆ. ಆಗ ಕಾಂಗ್ರೆಸ್‌ನ ಯುವರಾಜ, ಅದೂ ಅವರೊಬ್ಬ ಸಂಸದರಾಗಿದ್ದರಷ್ಟೆ. ಅವರ ಓಡಾಟಕ್ಕಾಗಿ ನನ್ನ ಹೆಲಿಕಾಪ್ಟರ್‌ನ ಹಾರಾಟಕ್ಕೆ ತಡೆ ನೀಡಲಾಗಿತ್ತು’ ಎಂದು ಮೋದಿ ಆರೋಪಿಸಿದ್ದಾರೆ.

‘ಹೋಷಿಯಾರ್‌ಪುರದಲ್ಲಿ ರಾಹುಲ್ ಗಾಂಧಿ ಅವರ ರ‍್ಯಾಲಿಯಲ್ಲಿ ನಾನು ಭಾಗಿಯಾಗಬೇಕಿತ್ತು. ಅಲ್ಲಿಗೆ ವಿಮಾನದಲ್ಲಿ ಹೋಗಲು ನನಗೆ ಅನುಮತಿ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ಬರುತ್ತಾರೆ ಎಂದು ಅನುಮತಿ ನಿರಾಕರಿಸಲಾಯಿತು’ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.