ADVERTISEMENT

ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಿಲ್ಲ; ಆರೋಗ್ಯ ಸಚಿವಾಲಯ

ಪಿಟಿಐ
Published 6 ಜುಲೈ 2024, 16:12 IST
Last Updated 6 ಜುಲೈ 2024, 16:12 IST
ನೀಟ್‌
ನೀಟ್‌   

ವದೆಹಲಿ (ಪಿಟಿಐ): ‘2024ನೇ ಸಾಲಿನ ನೀಟ್‌ ಯುಜಿ–ಪಿಜಿ ಕೋರ್ಸ್‌ಗಳ ಕೌನ್ಸೆಲಿಂಗ್‌ ವೇಳಾಪಟ್ಟಿಯನ್ನು ವೈದ್ಯಕೀಯ ಸಲಹಾ ಸಮಿತಿಯು (ಎಂಸಿಸಿ) ಇನ್ನೂ ಕೂಡ ಪ್ರಕಟಿಸಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.

ಪರೀಕ್ಷೆ ಮುಗಿದ ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಪ್ರತೀ ಕೋರ್ಸ್‌ಗೆ ಸಂಸ್ಥೆಯೊಂದಕ್ಕೆ ನೀಡಲಾಗುವ ಸೀಟುಗಳ ಸಂಖ್ಯೆ (ಸೀಟ್‌ ಮ್ಯಾಟ್ರಿಕ್ಸ್‌) ಯನ್ನು ಅಂತಿಮಗೊಳಿಸಿದ ಬಳಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಸೂಚನೆಯಂತೆ ಎಂಸಿಸಿಯು ನೀಟ್‌ ಯುಜಿ– ಪಿಜಿ ಕೌನ್ಸೆಲಿಂಗ್‌ ವೇಳಾಪಟ್ಟಿಯನ್ನು ಪ್ರತೀ ವರ್ಷವೂ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.

‘2021, 2022, 2023ರಲ್ಲಿ ಯುಜಿ ಸೀಟುಗಳ ಕೌನ್ಸೆಲಿಂಗ್‌ ಪ್ರಕ್ರಿಯೆಯು ಕ್ರಮವಾಗಿ 2021ರ ಜನವರಿ 1, 2022ರ ಅಕ್ಟೋಬರ್‌ 11 ಹಾಗೂ 2023ರ ಜುಲೈ 20ರಂದು ನಡೆದಿತ್ತು’ ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.