ಶ್ರೀಹರಿಕೋಟಾ (ಆಂಧ್ರಪ್ರದೇಶ): ಚಂದ್ರನತ್ತ ಗಗನನೌಕೆಯನ್ನು (ಚಂದ್ರಯಾನ–3) ಉಡ್ಡಯನ ಮಾಡಿ ಗಮನ ಸಳೆದಿರುವ ಇಸ್ರೊ, ಈಗ ಸಿಂಗಪುರದ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಲು ಸನ್ನದ್ಧವಾಗಿದ್ದು, ಕ್ಷಣಗಣನೆ ಶನಿವಾರ ಆರಂಭವಾಗಿದೆ.
‘ಡಿಎಸ್–ಎಸ್‌ಎಆರ್’ ಹಾಗೂ ಇತರ ಆರು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ56 ರಾಕೆಟ್ ಭಾನುವಾರ ಬೆಳಿಗ್ಗೆ 6.30ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಿಮ್ಮಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಇಸ್ರೊದ ವಾಣಿಜ್ಯ ಉದ್ದೇಶದ ಅಂಗಸಂಸ್ಥೆಯಾಗಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಬಾಹ್ಯಾಕಾಶ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.