ADVERTISEMENT

ಆಕಾರ್ ಪಟೇಲ್ ವಿರುದ್ಧದ ಎಲ್ಒಸಿ: 16ಕ್ಕೆ ಕೋರ್ಟ್ ತೀರ್ಪು

ಪಿಟಿಐ
Published 13 ಏಪ್ರಿಲ್ 2022, 14:19 IST
Last Updated 13 ಏಪ್ರಿಲ್ 2022, 14:19 IST
ಆಕಾರ್ ಪಟೇಲ್
ಆಕಾರ್ ಪಟೇಲ್   

ನವದೆಹಲಿ: ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅವರ ವಿರುದ್ಧ ಹೊರಡಿಸಲಾದ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಹಿಂಪಡೆಯುವ ಹಾಗೂ ಪಟೇಲ್ ಅವರ ಕ್ಷಮೆಯಾಚಿಸುವಂತೆ ನ್ಯಾಯಾಲಯವು ನೀಡಿರುವ ನಿರ್ದೇಶನದ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಏಪ್ರಿಲ್ 16ರಂದು ದೆಹಲಿ ನ್ಯಾಯಾಲಯವು ತೀರ್ಪು ಪ್ರಕಟಿಸಲಿದೆ.

ವಿಶೇಷ ನ್ಯಾಯಾಧೀಶರಾದ ಸಂತೋಷ್ ಸ್ನೇಹಿ ಮಾನ್ ಅವರು, ‘ಸಿಬಿಐ ಸಲ್ಲಿಸಿರುವ ಲಿಖಿತರೂಪದ ಪರಿಷ್ಕೃತ ಅರ್ಜಿಯನ್ನು ಬುಧವಾರ ಸ್ವೀಕರಿಸಿದ್ದೇನೆ. ಅದನ್ನು ಪರಿಶೀಲಿಸಲು ಸಮಯ ಬೇಕು’ ಎಂದು ಹೇಳಿ ತೀರ್ಪನ್ನು ಏ. 16ಕ್ಕೆ ಮುಂದೂಡಿದರು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಪರಿಷ್ಕರಿಸಲು ಕೋರಿ ಸಿಬಿಐ ಸಲ್ಲಿಸಿದ ಮನವಿಯ ಕುರಿತು ಸಿಬಿಐ ಮತ್ತು ಆರೋಪಿಗಳ ಪರ ವಾದ ಮಂಡಿಸಿದ ವಕೀಲರ ವಾದವನ್ನು ಆಲಿಸಿದ ನಂತರ, ನ್ಯಾಯಾಲಯವು ಈ ಹಿಂದೆ ಮಂಗಳವಾರಕ್ಕೆ ಆದೇಶವನ್ನು ಕಾಯ್ದಿರಿಸಿತ್ತು.

ADVERTISEMENT

ಆಕಾರ್ ಪಟೇಲ್ ಅವರ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಹಿಂಪಡೆಯಲು ಹಾಗೂ ಅವರ ಕ್ಷಮೆಯಾಚಿಸುವಂತೆ ಸಿಬಿಐಗೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಏಪ್ರಿಲ್ 7ರಂದು ಆದೇಶ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.