ನವದೆಹಲಿ: ಕೋರ್ಟ್‌ಗಳು ಜಾಮೀನು ನೀಡುವ ಆದೇಶ ಹೊರಡಿಸಿದ ಆರು ತಿಂಗಳ ನಂತರ, ಜಾಮೀನಿಗೆ ಸಂಬಂಧಿಸಿದ ಬಾಂಡ್ ಒದಗಿಸುವಂತೆ ಆರೋಪಿಗೆ ಷರತ್ತು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಹಾರ ಪಾನನಿಷೇಧ ಮತ್ತು ಅಬಕಾರಿ ತಿದ್ದುಪಡಿ ಕಾಯ್ದೆಯ ಅಡಿ ದಾಖಲಾಗಿರುವ ಪ್ರಕರಣದಲ್ಲಿ ತಮಗೆ ಆರು ತಿಂಗಳ ನಂತರ ಜಾಮೀನಿಗೆ ಸಂಬಂಧಿಸಿದ ಬಾಂಡ್ ಒದಗಿಸಲು ಪಟ್ನಾ ಹೈಕೋರ್ಟ್ ಸೂಚನೆ ನೀಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮ ಅವರು ಇರುವ ವಿಭಾಗೀಯ ಪೀಠ ನಡೆಸಿತು.
‘ಪ್ರಕರಣವನ್ನು ಸತ್ಯಾಸತ್ಯತೆಯ ಆಧಾರದಲ್ಲಿ ತೀರ್ಮಾನಿಸುವ ಬದಲು ಹೈಕೋರ್ಟ್ ಈ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿ, ಆದೇಶ ನೀಡಿದ ಆರು ತಿಂಗಳ ನಂತರ ಬಾಂಡ್ ಒದಗಿಸಬೇಕು ಎಂದು ಹೇಳಿದೆ... ನಮ್ಮ ಪ್ರಕಾರ ಜಾಮೀನು ನೀಡುವುದಕ್ಕೆ ಇಂತಹ ಯಾವುದೇ ಷರತ್ತನ್ನು ಆರೋಪಿಗೆ ವಿಧಿಸಲಾಗದು’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.