ADVERTISEMENT

ಕೊರೊನಾ ರೂಪಾಂತರ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ: ಐಸಿಎಂಆರ್

ಪಿಟಿಐ
Published 15 ಜೂನ್ 2022, 9:06 IST
Last Updated 15 ಜೂನ್ 2022, 9:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಓಮೈಕ್ರಾನ್ ಬಿಎ.1.1, ಬಿಎ.2 ಸೇರಿದಂತೆ ಕೊರೊನಾ ವೈರಸ್‌ನ ವಿವಿಧ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿ ಎಂಬುದು ಭಾರತ್ ಬಯೋಟೆಕ್‌ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನದಿಂದ ತಿಳಿದುಬಂದಿದೆ.

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ಪಡೆಯುವುದು ಡೆಲ್ಟಾ, ಓಮೈಕ್ರಾನ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ‘ಸಿರಿಯನ್ ಹ್ಯಾಮ್‌ಸ್ಟರ್ ಮಾದರಿ’ಯಲ್ಲಿ ಅಧ್ಯಯನ ನಡೆಸಲಾಗಿತ್ತು.

ಪ್ರತಿಕಾಯಗಳ ಪ್ರತಿಕ್ರಿಯೆ, ವೈರಸ್ ಸಂಖ್ಯೆಯಲ್ಲಿ ಕಡಿತ, ಶ್ವಾಸಕೋಶದ ಕಾಯಿಲೆಯ ತೀವ್ರತೆ, ವೈರಸ್ ಸಾಮರ್ಥ್ಯ, ಈ ಎಲ್ಲ ಅಂಶಗಳನ್ನು ಗಮನಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನ ವರದಿ ಮಂಗಳವಾರ ‘ಬಯೊಆರ್‌ಎಕ್ಸ್‌ಐವಿ’ಯಲ್ಲಿ ಪ್ರಕಟಗೊಂಡಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ. ಮತ್ತೆ ಸೋಂಕು ಪ್ರಕರಣಗಳ ಏರಿಕೆ ಆತಂಕ ಹೆಚ್ಚಿರುವ ಮಧ್ಯೆಯ ಈ ಅಧ್ಯಯನ ವರದಿ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.