ಅಯೋಧ್ಯೆ: ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಈ ವರ್ಷ ಅಯೋಧ್ಯೆಯಲ್ಲಿ ವರ್ಚುವಲ್ ದೀಪೋತ್ಸವಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ ಈ ವರ್ಷದ ವರ್ಚುವಲ್ ದೀಪೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್–19 ಕಾರಣದಿಂದಾಗಿ ಅಯೋಧ್ಯೆಗೆ ಬರಲಾಗದವರು ವೆಬ್‌ಸೈಟ್ ಮೂಲಕ ರಾಮ ಲಲ್ಲಾನ ಎದುರು ದೀಪ ಬೆಳಗಲು ಅವಕಾಶವಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಅಯೋಧ್ಯೆ ಸರಯೂ ನದಿ ತಟದಲ್ಲಿ ದೀಪಗಳ ದಾಖಲೆ
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಇದೇ ಮೊದಲ ಬಾರಿಗೆ ದೀಪೋತ್ಸವ ಆಯೋಜಿಸಲಾಗುತ್ತಿದೆ. ಕಳೆದ 500 ವರ್ಷಗಳಿಂದ ಬಾಕಿ ಇರುವ ಕಾರ್ಯಕ್ರಮ ಇದಾಗಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ.
‘ಈ ವರ್ಷದ ದೀಪೋತ್ಸವದಲ್ಲಿ 5 ಲಕ್ಷ ಹಣತೆಗಳನ್ನು ಬೆಳಗಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಮಾರ್ಗದರ್ಶನದಲ್ಲಿ ಯೋಗಿ ಆದಿತ್ಯನಾಥ ಅವರು ದೀಪೋತ್ಸವ ಆಚರಣೆ ಆರಂಭಿಸಿದ್ದಾರೆ. 2018ರಲ್ಲಿ ದೀಪೋತ್ಸವ ಗಿನ್ನೆಸ್ ದಾಖಲೆ ನಿರ್ಮಿಸಿತ್ತು. 2019ರ ದೀಪೋತ್ಸವ ಮತ್ತೆ ದಾಖಲೆ ನಿರ್ಮಿಸಿತ್ತು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.