ನವದೆಹಲಿ: ಕಳೆದ 24 ಗಂಟೆಗಳಲ್ಲಿ 24,248 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ 6,97,413ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 425 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 20 ಸಾವಿರದ ಸನಿಹಕ್ಕೆ (10,693) ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸುಮಾರು 4,24,432 ಸೋಂಕಿತರು ಇದುವರೆಗೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಶೇ.60.85 ರಷ್ಟು ಸೋಂಕಿತರು ಗುಣಮುಖರಾದಂತಾಗಿದೆ. ಉಳಿದಂತೆ 2,53,287 ಪ್ರಕರಣಗಳು ಸಕ್ರಿಯವಾಗಿವೆ.
ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಮೊದಲ ಮೂರು ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಒಟ್ಟು 4,17,214 ಜನರಿಗೆ ಸೋಂಕು ತಗುಲಿದೆ. ಈ ಸಾಲಿನಲ್ಲಿ ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಕ್ರಮವಾಗಿ 4, 5, 6 ಮತ್ತು 7ನೇ ಸ್ಥಾನದಲ್ಲಿವೆ.
ಕೊರೊನಾ ಸೋಂಕಿನ ರಾಜ್ಯವಾರು ಪ್ರಕರಣಗಳು ಇಲ್ಲಿವೆ..
ರಾಜ್ಯ/ಕೇಂದ್ರಾಡಳಿತಪ್ರದೇಶ | ಒಟ್ಟು ಸೋಂಕಿತರು | ಸಕ್ರಿಯ ಪ್ರಕರಣ | ಗುಣಮುಖರಾದವರು | ಮೃತಪಟ್ಟವರು |
---|---|---|---|---|
ಮಹಾರಾಷ್ಟ್ರ | 2,06,619 | 86,057 | 1,11,740 | 8,822 |
ತಮಿಳುನಾಡು | 11,1151 | 46,863 | 62,778 | 1,510 |
ದೆಹಲಿ | 99,444 | 25,038 | 71,339 | 3,067 |
ಗುಜರಾತ್ | 36,037 | 8,202 | 25,892 | 1943 |
ಉತ್ತರ ಪ್ರದೇಶ | 27,707 | 8,161 | 18,761 | 785 |
ತೆಲಂಗಾಣ | 23,902 | 10,904 | 12,703 | 295 |
ಕರ್ನಾಟಕ | 23,474 | 13,255 | 9,847 | 372 |
ಪಶ್ಚಿಮ ಬಂಗಾಳ | 22,126 | 6,658 | 14,711 | 757 |
ರಾಜಸ್ಥಾನ | 20,164 | 3,780 | 15,928 | 456 |
ಆಂಧ್ರ ಪ್ರದೇಶ | 18,697 | 10,043 | 8,422 | 232 |
ಹರಿಯಾಣ | 17,005 | 3,796 | 12,944 | 265 |
ಮಧ್ಯಪ್ರದೇಶ | 14,930 | 2,911 | 11,411 | 608 |
ಬಿಹಾರ | 11,876 | 3,016 | 8,765 | 95 |
ಅಸ್ಸಾಂ | 11,388 | 4,249 | 7,125 | 14 |
ಒಡಿಶಾ | 9,070 | 2,810 | 6,224 | 36 |
ಜಮ್ಮು ಕಾಶ್ಮೀರ | 8,429 | 3,042 | 5,255 | 132 |
ಪಂಜಾಬ್ | 6,283 | 1,711 | 4,408 | 164 |
ಕೇರಳ | 5,429 | 2230 | 3,174 | 25 |
ಛತ್ತೀಸಗಢ | 3,207 | 592 | 2,601 | 14 |
ಉತ್ತರಾಖಂಡ್ | 3,124 | 558 | 2,524 | 42 |
ಜಾರ್ಖಂಡ್ | 2,781 | 717 | 2045 | 19 |
ಗೋವಾ | 1,761 | 818 | 936 | 7 |
ತ್ರಿಪುರ | 1,568 | 365 | 1202 | 1 |
ಮಣಿಪುರ | 1,366 | 678 | 688 | 0 |
ಹಿಮಾಚಲ ಪ್ರದೇಶ | 1,063 | 315 | 737 | 11 |
ಲಡಾಖ್ | 1,005 | 178 | 826 | 1 |
ಪುದುಚೇರಿ | 802 | 459 | 331 | 12 |
ನಾಗಾಲ್ಯಾಂಡ್ | 590 | 359 | 231 | 0 |
ಚಂಡೀಗಢ | 466 | 65 | 395 | 6 |
ದಾದ್ರ– ನಗರ ಹವೇಲಿ | 271 | 165 | 106 | 0 |
ಅರುಣಾಚಲ ಪ್ರದೇಶ | 269 | 190 | 78 | 1 |
ಮಿಜೋರಾಂ | 186 | 56 | 130 | 0 |
ಅಂಡಮಾನ್ ನಿಕೋಬಾರ್ | 125 | 53 | 72 | 0 |
ಸಿಕ್ಕಿಂ | 123 | 62 | 61 | 0 |
ಮೇಘಾಲಯ | 62 | 18 | 43 | 1 |
ಲಕ್ಷದ್ವೀಪ | 0 | 0 | 0 | 0 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.