ನವದೆಹಲಿ: ಕೋವಿಡ್–19 ರೂಪಾಂತರ ತಳಿ ‘ಓಮೈಕ್ರಾನ್’ ವೈರಾಣು ದೃಢಪಟ್ಟವರ ಸಂಖ್ಯೆ ದೇಶದಲ್ಲಿ ಬುಧವಾರ 67ಕ್ಕೆ ಏರಿದೆ.
ಆದರೆ, ಕೋವಿಡ್–19 ಪರೀಕ್ಷೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಓಮೈಕ್ರಾನ್ ವೈರಾಣು ಪತ್ತೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 32, ರಾಜಸ್ಥಾನದಲ್ಲಿ 17 ಮತ್ತು ದೆಹಲಿಯಲ್ಲಿ ಆರು ಜನರಲ್ಲಿ ಈ ವೈರಾಣು ಇರುವುದು ದೃಢಪಟ್ಟಿದೆ.
ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಈ ತಳಿಯ ವೈರಾಣು ಕಾಣಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.