ADVERTISEMENT

ಕೋವಿಡ್‌ ಭೀತಿ: ಮಾಸ್ಕ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಸಂಸದರು

ಮಾಸ್ಕ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಲೋಕಸಭೆ ಸ್ಪೀಕರ್‌, ರಾಜ್ಯಸಭೆ ಸಭಾ‍ಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2022, 7:52 IST
Last Updated 22 ಡಿಸೆಂಬರ್ 2022, 7:52 IST
ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಸಂಸದರು
ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಸಂಸದರು   

ನವದೆಹಲಿ: ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ದೇಶದಲ್ಲಿ ಒಮೈಕ್ರಾನ್‌ ಉಪತಳಿಗಳ ಪತ್ತೆ ಬೆನ್ನಲ್ಲೇ, ಗುರುವಾರ ಸಂಸದರು ಅಧಿವೇಶನಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ದೃಶ್ಯ ಕಂಡುಬಂತು.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆ ಸಭಾಪ‍ತಿ ಜಗದೀಪ್‌ ಧನಕರ್ ಅವರು ಮಾಸ್ಕ್ ಧರಿಸಿ ಕಲಾಪವನ್ನು ಪ್ರಾರಂಭಿಸಿದರು. ಹಲವು ಸಂಸದರು ಕೂಡ ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದರು.

ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ, ಮಾಸ್ಕ್ ಧರಿಸುವುದರ ಬಗ್ಗೆ ಹಾಗೂ ಕೋವಿಡ್‌ ನಿಯಮ ಪಾಲನೆ ಮಾಡುವುದರ ಬಗ್ಗೆ ಸ್ಪೀಕರ್‌ ಓಂ ಬಿರ್ಲಾ ಅವರು ಸದಸ್ಯರಿಗೆ ಸೂಚನೆ ನೀಡದರು. ಸಾಂಕ್ರಮಿಕ ರೋಗದ ಈ ಹಿಂದಿನ ಅನುಭವಗಳನ್ನು ಕಂಡು ನಾವು ಜಾಗರೂಕರಾಗಿರಬೇಕು‘ ಎಂದು ಅವರು ಹೇಳಿದರು.

ADVERTISEMENT

ಅಲ್ಲದೇ ಪ್ರವೇಶ ದ್ವಾರಗಳಲ್ಲಿ ಸದಸ್ಯರಿಗೆ ಮಾಸ್ಕ್‌ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮತ್ತೆ ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸಭೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಗುಜರಾತ್‌ ಹಾಗೂ ಒಡಿಶಾದಲ್ಲಿ ತಲಾ ಎರಡೆರಡು ಪ್ರಕರಣಗಳು ದೃಢಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.