ADVERTISEMENT

CoWIN Data Leak | ಕೋವಿನ್ ಪೋರ್ಟಲ್‌ನ ದತ್ತಾಂಶ ಸೋರಿಕೆ ಪ್ರಕರಣ: ಇಬ್ಬರ ಬಂಧನ

ಪಿಟಿಐ
Published 22 ಜೂನ್ 2023, 10:27 IST
Last Updated 22 ಜೂನ್ 2023, 10:27 IST
CoWIN ಪೋರ್ಟಲ್‌
CoWIN ಪೋರ್ಟಲ್‌   

ನವದೆಹಲಿ: ಕೋವಿನ್ (CoWIN) ಪೋರ್ಟಲ್‌ನ ದತ್ತಾಂಶ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಾಲಕ  ಹಾಗೂ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ವ್ಯಕ್ತಿಯು ಮಾಹಿತಿ ಸೋರಿಕೆಗೆ ಟೆಲಿಗ್ರಾಂ ಆ್ಯಪ್‌ ಬಳಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್‌ ಲಸಿಕೆ ಪಡೆದುಕೊಂಡವರಿಗೆ ಸಂಬಂಧಿಸಿದ ಮಾಹಿತಿಯು CoWIN ಪೋರ್ಟಲ್‌ನಲ್ಲಿ ಸೋರಿಕೆಯಾಗಿದೆ ಎಂದು ಈಚೆಗೆ ವರದಿಯಾಗಿತ್ತು.

ADVERTISEMENT

ಹೀಗಾಗಿ, CoWIN ಪೋರ್ಟಲ್‌ಗೆ ನೋಂದಣಿ ಮಾಡಿಕೊಂಡಿದ್ದ ನಾಗರಿಕರ ಮಾಹಿತಿ ಸೋರಿಕೆ ಸಂಬಂಧ ತೀವ್ರ ಕಳವಳ ವ್ಯಕ್ತವಾಗಿದೆ. ದತ್ತಾಂಶ ಸೋರಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.

ದತ್ತಾಂಶ ಸೋರಿಕೆ ಕುರಿತ ವರದಿಗಳು ದುರುದ್ದೇಶ ಹಾಗೂ ಆಧಾರ ರಹಿತವಾದವು ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರ, ದತ್ತಾಂಶ ಗೌಪ್ಯತೆ ಕಾಪಾಡಲು ಹಲವು ಸುರಕ್ಷಿತ ಮಾರ್ಗಗಳನ್ನು ಅಳವಡಿಸಿಕೊಳ್ಳಲಾಗಿದೆ. CoWIN ಪೋರ್ಟಲ್‌ ಸಂಪೂರ್ಣ ಸುರಕ್ಷಿತವಾಗಿದೆ ಎಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.