ಬೆಂಗಳೂರು: ದ್ರವೀಕೃತ ವೈದ್ಯಕೀಯ ಆಮ್ಲಜನಕದ ಕಂಟೈನರ್‌ಗಳನ್ನು ಹೊತ್ತ ಒಂಬತ್ತನೇ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ವೈಟ್‌ಫೀಲ್ಡ್‌ಗೆತಲುಪಿದೆ.
120 ಟನ್‌ನಷ್ಟು ಆಮ್ಲಜನಕದ ಕಂಟೈನರ್‌ಗಳನ್ನು ಹೊತ್ತ ರೈಲು ಶುಕ್ರವಾರ ರಾತ್ರಿ 11:35ಕ್ಕೆ ಜಾರ್ಖಂಡ್‌ನ ಟಾಟಾ ನಗರದಿಂದ ಹೊರಟಿದೆ. ಇದು ಭಾನುವಾರ ಬೆಳಿಗ್ಗೆ 7:30ಕ್ಕೆ ಬೆಂಗಳೂರನ್ನು ತಲುಪಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
ಆಮ್ಲಜನಕವನ್ನು ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್ ಕಾರಿಡಾರ್ ಅನ್ನು ಕಲ್ಪಿಸಲಾಗಿತ್ತು. ಈ ರೈಲು ಆರು ಕಂಟೈನರ್‌ಗಳನ್ನು ಹೊಂದಿದ್ದು, ಪ್ರತಿ ಕಂಟೈನರ್‌ನಲ್ಲಿ 20 ಟನ್ ಆಮ್ಲಜನಕವಿದೆ.
ಇಲ್ಲಿಯವರೆಗೆ ಕರ್ನಾಟಕಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ 1062.14 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.