ADVERTISEMENT

ಕೋವಿಡ್‌ ಇನ್ನೂ ಮುಗಿದಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸಿ: ರಾಮನಾಥ್ ಕೋವಿಂದ್‌

​ಪ್ರಜಾವಾಣಿ ವಾರ್ತೆ
Published 3 ಮೇ 2022, 14:33 IST
Last Updated 3 ಮೇ 2022, 14:33 IST
ದೆಹಲಿಯಲ್ಲಿ ಭಗವಾನ್‌ ಮಹಾವೀರ್‌ ಸೂಪರ್‌ ಸ್ಪೆಷ್ಪಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಚಾಲನೆ ನೀಡಿದರು.
ದೆಹಲಿಯಲ್ಲಿ ಭಗವಾನ್‌ ಮಹಾವೀರ್‌ ಸೂಪರ್‌ ಸ್ಪೆಷ್ಪಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಚಾಲನೆ ನೀಡಿದರು.   

ನವದೆಹಲಿ: ಕೋವಿಡ್‌ ಇನ್ನೂ ಮುಗಿದಿಲ್ಲ. ಸೋಂಕು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಿ ಎಂದು ಸಾರ್ವಜನಿಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಸಲಹೆ ನೀಡಿದರು.

ದೆಹಲಿಯಲ್ಲಿ ಭಗವಾನ್‌ ಮಹಾವೀರ್‌ ಸೂಪರ್‌ ಸ್ಪೆಷಾಲಿಟಿ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸೋಂಕು ತಡೆಗಟ್ಟಲು ಮಾಸ್ಕ್‌ ಪರಿಣಾಮಕಾರಿ ಅಸ್ತ್ರ ಎಂದರು.

250 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ 2023ರ ವೇಳೆಗೆ ಮುಕ್ತಾಯವಾಗಲಿದೆ. ಇಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಮಾಜದ ಎಲ್ಲ ವರ್ಗದವರಿಗೂ ಕೈ ಗೆಟಕುವ ದರದಲ್ಲಿ ಮತ್ತು ಬಡವರಿಗೆ ಉಚಿತವಾಗಿ ದೊರಕಲಿದೆ. ಇದು ಸಂತಸದ ಸಂಗತಿ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.