ADVERTISEMENT

ದೆಹಲಿ ನಿವಾಸಿಗಳಲ್ಲಿ ಕೋವಿಡ್‌ ಪ್ರಸರಣ: 15 ದಿನಗಳಲ್ಲಿ ಶೇ 500ರಷ್ಟು ಹೆಚ್ಚಳ

‘ಲೋಕಲ್‌ ಸರ್ಕಲ್ಸ್‌’ ಸಂಸ್ಥೆಯಿಂದ ಸಮೀಕ್ಷೆ

ಪಿಟಿಐ
Published 17 ಏಪ್ರಿಲ್ 2022, 13:51 IST
Last Updated 17 ಏಪ್ರಿಲ್ 2022, 13:51 IST
corona virus
corona virus   

ನವದೆಹಲಿ: ‘ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ’ದ (ದೆಹಲಿ–ಎನ್‌ಸಿಆರ್‌) ನಿವಾಸಿಗಳ ಪೈಕಿ ತಮ್ಮ ಹತ್ತಿರದವರಿಂದಲೇ ಕೊರೊನಾ ಸೋಂಕು ತಗುಲಿಸಿಕೊಂಡವರ ಸಂಖ್ಯೆಯಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಶೇ 500ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ಲೋಕಲ್ ಸರ್ಕಲ್ಸ್‌’ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಭಾಗವಾಗಿ ಒಟ್ಟು 11,743 ಜನರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಶೇ 67 ರಷ್ಟು ಪುರುಷರು ಹಾಗೂ ಶೇ 33ರಷ್ಟು ಮಹಿಳೆಯರು ಇದ್ದರು ಎಂದು ಸಂಸ್ಥೆ ತಿಳಿಸಿದೆ.

‘ಕಳೆದ 15 ದಿನಗಳ ಅವಧಿಯಲ್ಲಿ ತಮ್ಮ ಹತ್ತಿರದವರ ಪೈಕಿ ಒಬ್ಬರು ಅಥವಾ ಹೆಚ್ಚು ಜನರಿಗೆ ಕೋವಿಡ್‌ ದೃಢಪಟ್ಟಿದೆ ಎಂದು ಸಮೀಕ್ಷೆಯ ಭಾಗವಾಗಿದ್ದವರ ಪೈಕಿ ಶೇ 19ರಷ್ಟು ನಿವಾಸಿಗಳು ತಿಳಿಸಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.