ADVERTISEMENT

ದೇಶದಲ್ಲಿ 2 ಸಾವಿರ ಗಡಿದಾಟಿದ ಕೊರೊನಾ ರೂಪಾಂತರಿ JN.1 ಸೋಂಕಿತರ ಸಂಖ್ಯೆ

ಪಿಟಿಐ
Published 29 ಜನವರಿ 2024, 14:06 IST
Last Updated 29 ಜನವರಿ 2024, 14:06 IST
ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಏರಿಕೆ
ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಏರಿಕೆ   

ನವದೆಹಲಿ: ಕೋವಿಡ್ 19 ರೂಪಾಂತರಿ ಜೆಎನ್‌.1 (JN.1) ಸೋಂಕು ತಗುಲಿದವರ ಸಂಖ್ಯೆ ದೇಶದಲ್ಲಿ 2,083ಕ್ಕೆ ಏರಿಕೆಯಾಗಿದೆ ಎಂದು  INSACOG  ಸೋಮವಾರ ತಿಳಿಸಿದೆ.

18 ರಾಜ್ಯಗಳಲ್ಲಿ 814 ಪ್ರಕರಣಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ 943 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಜೆಎನ್. 1 ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಳಿಕ ದೇಶದಾದ್ಯಂತ ಕಟ್ಟೆಚ್ಚರವಹಿಸಲಾಗಿತ್ತು.

ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿತ್ತು. ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ ಆತಂಕಪಡುವ ಅಗತ್ಯವಿಲ್ಲ. ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡರೆ ಗುಣಮುಖವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.