ADVERTISEMENT

ಕ್ಯಾನ್ಸರ್ ಕಾಯಿಲೆಗೆ ಗೋಮೂತ್ರ ಔಷಧಿ: ಕೇಂದ್ರ ಸಚಿವ ಅಶ್ವಿನಿ ಚೌಬೆ

ಏಜೆನ್ಸೀಸ್
Published 8 ಸೆಪ್ಟೆಂಬರ್ 2019, 10:49 IST
Last Updated 8 ಸೆಪ್ಟೆಂಬರ್ 2019, 10:49 IST
   

ನವದೆಹಲಿ: ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸಲು ಬಳಸುತ್ತಿರುವುದುಗೋಮೂತ್ರದಿಂದ ತಯಾರಿಸಿದ ಔಷಧಿಯಾಗಿದೆ. ಹಾಗಾಗಿ ಭಾರತ ಸರ್ಕಾರವು ಹಸುಗಳ ಸಂರಕ್ಷಣೆಗಾಗಿ ಹೊಸ ಯೋಜನೆ ಸಿದ್ಧಪಡಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಗೋಮೂತ್ರದಿಂದ ಹಲವಾರು ಔಷಧಿಗಳು ತಯಾರಾಗುತ್ತಿವೆ. ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಬಳಸುವ ಔಷಧಿಯೂ ಗೋಮೂತ್ರದಿಂದಲೇ ತಯಾರಿಸಿದ್ದು. ದೇಸೀ ಗೋವುಗಳ ರಕ್ಷಣೆಗಾಗಿ ಸರ್ಕಾರ ಯೋಜನೆ ಸಿದ್ದಪಡಿಸಿದೆ. ಈ ಬಗ್ಗೆ ಆಯುಷ್ ಸಚಿವಾಲಯ ಕಾರ್ಯ ಪ್ರವೃತ್ತವಾಗಿದೆ ಎಂದಿದ್ದಾರೆ.

ಕೃತಕ ಗರ್ಭಧಾರಣೆ ಮೂಲಕ ಹಸುಗಳ ಜನನ ಪ್ರಮಾಣ ಹೆಚ್ಚಿಸುವ ಬಗ್ಗೆ ಪಶುಸಂಗೋಪನ ವಿಭಾಗ ಕಾರ್ಯವೆಸಗುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗುರುವಾರ ಹೇಳಿದ್ದರು. ಇದರಿಂದಾಗಿ ಗುಂಪುಹಲ್ಲೆ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂದ ಸಚಿವರು ಪ್ರಾಥಮಿಕ ಹಂತದಲ್ಲಿ30 ಲಕ್ಷ ಡೋಸ್ ಔಷಧಿಗಳನ್ನು ತಯಾರಿಸುವ ಗುರಿ ಕೇಂದ್ರ ಸರ್ಕಾರದ್ದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.