ADVERTISEMENT

ಅದಾನಿ ಗ್ರೂಪ್‌ ವಿರುದ್ಧ ಆರೋಪ: ಸಿಬಿಐ ತನಿಖೆಗೆ ಸಿಪಿಐ(ಎಂ) ಒತ್ತಾಯ

ಪಿಟಿಐ
Published 21 ನವೆಂಬರ್ 2024, 11:18 IST
Last Updated 21 ನವೆಂಬರ್ 2024, 11:18 IST
ಸಿಪಿಐ (ಎಂ)
ಸಿಪಿಐ (ಎಂ)   

ನವದೆಹಲಿ: ಗೌತಮ್ ಅದಾನಿ ಗ್ರೂಪ್‌ ವಿರುದ್ಧದ ಆರೋಪಗಳ ಬಗ್ಗೆ ಸಿಪಿಐ(ಎಂ) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ನರೇಂದ್ರ ಮೋದಿ ಸರ್ಕಾರ ಇನ್ನು ಪರದೆಯ ಹಿಂದೆ ತಲೆಮರೆಸಿಕೊಳ್ಳಲು ಸಾಧ್ಯವಿಲ್ಲ, ಕೂಡಲೇ ಈ ಪ್ರಕರಣವನ್ನು ತನಿಖೆಗೆ ಕೇಂದ್ರ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಹೇಳಿದೆ.

ಅಮೆರಿಕದ ಕೋರ್ಟ್‌ ಬಂಧನದ ವಾರೆಂಟ್‌ ಹೊರಡಿಸಿರುವ ಹಿನ್ನೆಲೆಯಲ್ಲಿ ಸಿಬಿಐ ತಕ್ಷಣವೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಸಿಪಿಐ (ಎಂ) ಒತ್ತಾಯಿಸಿದೆ. ಸರ್ಕಾರದ ಅಧಿಕಾರಿಗಳು ಲಂಚ ಪಡೆದಿರುವ ಪ್ರಕರಣ ಅಮೆರಿಕದಲ್ಲಿ ಬಹಿರಂಗವಾಗಿರುವುದು ದೇಶಕ್ಕೆ ಅವಮಾನವಾದಂತಗಿದೆ ಎಂದು ಅದು ಹೇಳಿದೆ.

ADVERTISEMENT

ಆದರೆ, ಅದಾನಿ ಗುಂಪು ಈ ಆರೋಪಗಳನ್ನು ತಳ್ಳಿಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.