ADVERTISEMENT

ಲೈಂಗಿಕ ದೌರ್ಜನ್ಯ: ಶಾಸಕ ಮುಕೇಶ್ ಬಂಧನ, ಬಿಡುಗಡೆ

ಪಿಟಿಐ
Published 22 ಅಕ್ಟೋಬರ್ 2024, 12:22 IST
Last Updated 22 ಅಕ್ಟೋಬರ್ 2024, 12:22 IST
ಮುಕೇಶ್
ಮುಕೇಶ್   

ತ್ರಿಶ್ಶೂರ್: ಸಿಪಿಎಂ ಶಾಸಕ ಹಾಗೂ ನಟ ಮುಕೇಶ್‌ ಅವರನ್ನು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎಸ್‌ಐಟಿ ಪೊಲೀಸರು ಸೋಮವಾರ ಬಂಧಿಸಿದರು.

ಸೆಷನ್ಸ್‌ ನ್ಯಾಯಾಲಯದಿಂದ ಈ ಹಿಂದೆಯೇ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ, ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು ಎಂದು ಶಾಸಕರ ಪರ ವಕೀಲರು ತಿಳಿಸಿದ್ದಾರೆ.

2010ರಲ್ಲಿ ಕೇರಳದ ತ್ರಿಶ್ಶೂರ್‌ನಲ್ಲಿ ಮುಕೇಶ್‌ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳಾ ನಟಿಯೊಬ್ಬರು ದೂರು ನೀಡಿದ್ದರು.

ADVERTISEMENT

ಮುಕೇಶ್‌ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಒಂದು ವಡಕ್ಕಂಚೇರಿ ಪೊಲೀಸ್‌ ಠಾಣೆಯಲ್ಲಿ, ಇನ್ನೊಂದು ಮರಾಡು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಈ ಎರಡೂ ಪ್ರಕರಣದಲ್ಲಿ ಶಾಸಕರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.