ತಿರುವನಂತಪುರ: ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ವಿ.ಮುರಳೀಧರನ್ ಅವರು ಚುನಾವಣಾ ಪ್ರಚಾರದ ಫ್ಲೆಕ್ಸ್‌ನಲ್ಲಿ ದೇವರ ವಿಗ್ರಹದ ಚಿತ್ರವನ್ನು ಬಳಕೆ ಮಾಡಿದ್ದು, ಚುನಾವಣಾ ಆಯೋಗವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಡಳಿತಾರೂಢ ಸಿಪಿಎಂ ಸೋಮವಾರ ಆಗ್ರಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮರಳೀಧರನ್ ಅವರು ಜೊತೆಗಿರುವ ಫ್ಲೆಕ್ಸ್‌ನಲ್ಲಿ ವರ್ಕಲದ ಜನಾರ್ದನ ಸ್ವಾಮಿಯ ವಿಗ್ರಹದ ಚಿತ್ರವನ್ನು ಬಳಸಲಾಗಿದೆ ಎಂದು ಆರೋಪಿಸಿ ಸಿಪಿಎಂ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಮುರಳೀಧರನ್ ಅವರು ಆಟ್ಟಿಂಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ದೇವರ ವಿಗ್ರಹದ ಚಿತ್ರವನ್ನು ಚುನಾವಣಾ ಪ್ರಚಾರದ ಫ್ಲೆಕ್ಸ್‌ನಲ್ಲಿ ಬಳಕೆ ಮಾಡುವ ಮೂಲಕ ಮುರಳೀಧರನ್ ಅವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಿಪಿಎಂ ಮುಖಂಡ ಸಿ. ಜಯನ್ ಬಾಬು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುರಳೀಧರನ್ ಅವರು, ಸಿಪಿಎಂ ನೀಡಿರುವ ದೂರಿನ ಕುರಿತು ಮಾಹಿತಿ ಇಲ್ಲ. ಆ ಪಕ್ಷದ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.