ADVERTISEMENT

ಮಾನವೀಯತೆಗಾಗಿ ಮೌಲ್ಯಗಳನ್ನು ಬೆಳೆಸುವುದೇ ಆತ್ಮನಿರ್ಭರ ಭಾರತದ ಸಾರ: ಪ್ರಧಾನಿ ಮೋದಿ

ಪಿಟಿಐ
Published 11 ಮಾರ್ಚ್ 2021, 11:31 IST
Last Updated 11 ಮಾರ್ಚ್ 2021, 11:31 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಆತ್ಮನಿರ್ಭರ ಭಾರತವು ಜಗತ್ತಿಗೇಒಳ್ಳೆಯದು. ನಮಗೆ ಮಾತ್ರವಲ್ಲದೇ ಸಂಪೂರ್ಣ ಮಾನವೀಯತೆಗಾಗಿ ಸಂಪತ್ತು ಮತ್ತು ಮೌಲ್ಯಗಳನ್ನು ಬೆಳೆಸುವುದೇ ‘ಆತ್ಮನಿರ್ಭರ ಭಾರತ’ದ ತಿರುಳು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅವರು ಗುರುವಾರ ವಿಡಿಯೊ ಕಾನ್ಪರೆನ್ಸ್‌ ಮೂಲಕ ಸ್ವಾಮಿ ಚಿದ್ಭವನಂದಾ ಅವರ ‘ಭಗವದ್ಗೀತೆ’ಯ ಕಿಂಡಲ್‌ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ‘ಕಾಯಕದ ಮೂಲಕ ಏನನ್ನೂ ಸಾಧಿಸಬಹುದು ಎಂಬುದು ಮಹಾಕಾವ್ಯದ ಮೂಲ ಸಂದೇಶವಾಗಿದೆ. ಅದೇ ರೀತಿ ದೇಶದ 103 ಕೋಟಿ ಜನರು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡಲಿದ್ದಾರೆ. ನಮ್ಮ ದೇಶ ಆತ್ಮ ನಿರ್ಭರವಾಗಬೇಕು ಎಂಬುದು ಎಲ್ಲರ ಇಚ್ಛೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕೋವಿಡ್ ಸಮಯದಲ್ಲಿ ವಿಶ್ವಕ್ಕೆ ಔಷಧಿಗಳ ಅಗತ್ಯವಿದ್ದಾಗ ಭಾರತ ಅದನ್ನು ಪೂರೈಸಿತು. ಭಾರತ ತನ್ನಿಂದ ಏನೂ ಸಾಧ್ಯವೋ ಆ ಸಹಾಯವನ್ನು ಮಾಡುತ್ತಿದೆ. ನಮ್ಮ ವಿಜ್ಞಾನಿಗಳು ತ್ವರಿತವಾಗಿ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ದಿಪಡಿಸಿದರು. ಈಗ ಭಾರತದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ವಿಶ್ವದ ಇತರೆ ದೇಶಗಳು ಬಳಸುತ್ತಿದೆ. ನಾವು ಮಾನವೀಯತೆಗೆ ಸಹಾಯ ಮಾಡಲು ಬಯಸುತ್ತೇವೆ. ಇದನ್ನೇ ಭಗವದ್ಗೀತೆ ನಮಗೆ ಕಲಿಸಿಕೊಟ್ಟಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಇ–ಪುಸ್ತಕಗಳು ಯುವ ಜನರಲ್ಲಿ ಪ್ರಚಲಿತವನ್ನು ಪಡೆಯುತ್ತಿದೆ. ಇ–ಪುಸ್ತಕದ ಮೂಲಕ ಯುವ ಪೀಳಿಗೆಗೆ ಭಗವದ್ಗೀತೆಯ ಉತ್ತಮ ಆಲೋಚನೆಗಳು, ಚಿಂತನೆಗಳ ಬಗ್ಗೆ ತಿಳಿಯಪಡಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ’ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆಸ್ವಾಮಿ ಚಿದ್ಭವಾನಂದರಿಗೆಗೌರವ ಸಲ್ಲಿಸಿದ ಮೋದಿ,‘ ಚಿದ್ಭವಾನಂದ ಅವರು ತಮ್ಮ ಮನಸ್ಸು, ದೇಹ, ಹೃದಯ ಮತ್ತು ಆತ್ಮವನ್ನು ಭಾರತದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.