ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಐದು ನೂತನ ಜಿಲ್ಲೆಗಳನ್ನು ರಚಿಸುವುದು, ಉತ್ತಮ ಆಡಳಿತ ಮತ್ತು ಸಮೃದ್ಧಿಗೆ ಹೊಸ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಝನ್‌ಸ್ಕರ್, ದ್ರಾಸ್, ಶಾಮ್, ನುಬ್ರಾ ಮತ್ತು ಛಾಂಗ್‌ಥಂಗ್ ಎಂದು ಜಿಲ್ಲೆಗಳಿಗೆ ನಾಮಕರಣ ಮಾಡಲಾಗಿದೆ. ಇದರಿಂದಾಗಿ ಅಲ್ಲಿನ ಜನ ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತಾರೆ. ಎಲ್ಲಾ ರೀತಿಯ ಸೇವೆಗಳು ಜನರ ಮನೆಯ ಬಾಗಿಲಿಗೆ ಬರಲಿದೆ. ಹೊಸ ಜಿಲ್ಲೆಗಳ ಜನರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿದೆ. ಈಗ ಹೊಸ ಜಿಲ್ಲೆಗಳ ಘೋಷಣೆಯಾಗಿರುವುದರಿಂದ ಲಡಾಖ್‌ನಲ್ಲಿ ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಲಿದೆ. ಈವರೆಗೆ ಕಾರ್ಗಿಲ್ ಮತ್ತು ಲೇಹ್ ಮಾತ್ರವೇ ಇದ್ದವು.
ಲಡಾಖ್‌ನಲ್ಲಿ ಹೊಸ ಜಿಲ್ಲೆಗಳನ್ನು ರಚಿಸುವ ಬಗ್ಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.