ADVERTISEMENT

ಅಲಿಗಢದ ಶಾಲೆಯಲ್ಲಿ ಮೊಸಳೆ ಪ್ರತ್ಯಕ್ಷ; ಗಂಗಾ ನದಿಯಲ್ಲಿ ಬಿಡುಗಡೆ

ಪಿಟಿಐ
Published 21 ಸೆಪ್ಟೆಂಬರ್ 2022, 15:29 IST
Last Updated 21 ಸೆಪ್ಟೆಂಬರ್ 2022, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಲಿಗಢ: ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ಆವರಣದೊಳಗೆ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅಲಿಗಢದ ಖಾಸಿಂಪುರ ಗ್ರಾಮದ ಶಾಲೆಯಲ್ಲಿ ಮೊಸಳೆ ಪತ್ತೆಯಾಗಿತ್ತು. ಬಳಿಕ ಅದನ್ನು ಸೆರೆಹಿಡಿದು ಗಂಗಾ ನದಿಯಲ್ಲಿ ಬಿಡಲಾಯಿತು ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ದಿವಾಕರ್ ವಸಿಷ್ಠ ತಿಳಿಸಿದ್ದಾರೆ.

ಮೊಸಳೆಯನ್ನು ಕಂಡ ವಿದ್ಯಾರ್ಥಿಗಳು ಭೀತಿಗೊಳಗಾದರು. ಬಳಿಕ ಸ್ಥಳೀಯರು ಸೇರಿಕೊಂಡು ಕೊಠಡಿಯೊಳಗೆ ಕೂಡಿ ಹಾಕುವಲ್ಲಿ ಯಶಸ್ವಿಯಾದರು.

ADVERTISEMENT

ಈ ಪ್ರದೇಶದಲ್ಲಿ ಹಲವಾರು ಕೆರೆಗಳಿದ್ದು, ಸಮೀಪದಲ್ಲೇ ಗಂಗಾ ನದಿ ಹರಿಯುತ್ತಿದೆ. ಗ್ರಾಮದ ಕೆರೆಗಳಲ್ಲಿ ಹಲವಾರು ಬಾರಿ ಮೊಸಳೆಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಕೆರೆಗಳಲ್ಲಿ ಮೊಸಳೆ ವಾಸವಾಗಿವೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.