ADVERTISEMENT

ವಡೋದರಾದ ಬೀದಿಗಳಲ್ಲಿ ಮೊಸಳೆಗಳ ಕಾಟ

ಪಿಟಿಐ
Published 4 ಆಗಸ್ಟ್ 2024, 14:09 IST
Last Updated 4 ಆಗಸ್ಟ್ 2024, 14:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಹಮದಬಾದ್: ಮಿಶ್ವಾಮಿತ್ರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ವಡೋದರಾದ ಬೀದಿಗಳಲ್ಲಿ ಮೊಸಳೆಗಳ ಕಾಟ ಈ ವರ್ಷವೂ ಹೆಚ್ಚಾಗಿದೆ. ಜುಲೈನಲ್ಲಿ 21 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. 

‘ಜುಲೈನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿಶ್ವಾಮಿತ್ರಿ ನದಿಯ ಎರಡೂ ಬದಿಯಲ್ಲಿ ಜನವಸತಿ ಪ್ರದೇಶವಿದ್ದು, ವಡೋದರಾದ ರಸ್ತೆಗಳಲ್ಲಿ ಮೊಸಳೆಗಳ ಸಂಚಾರ ಹೆಚ್ಚಾಗಿದೆ. ಮೊಸಳೆಗಳನ್ನು ರಕ್ಷಿಸುವ ಕಾರ್ಯ ವರ್ಷವಿಡೀ ಮುಂದುವರೆದಿದೆ. ಜೂನ್‌ನಲ್ಲಿ ನಾಲ್ಕು ಮೊಸಳೆಗಳನ್ನು ರಕ್ಷಿಸಿ ನದಿಗೆ ಬಿಡಲಾಗಿತ್ತು. ಆದರೆ, ಜುಲೈನಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿದೆ’  ಎಂದು ವಲಯ ಅರಣ್ಯಾಧಿಕಾರಿ ಕರಣ್‌ ಸಿಂಗ್ ರಜಪೂತ್ ತಿಳಿಸಿದರು.

ADVERTISEMENT

‘ಕಾಡುಪ್ರಾಣಿಗಳು ತಮ್ಮ ನೆಲೆಯನ್ನು ಬಿಡಲು ಇಷ್ಟಪಡುವುದಿಲ್ಲ. ಆದರೆ, ಪ್ರವಾಹದ ಸಮಯದಲ್ಲಿ ಮಾತ್ರ ಆ ಜಾಗವನ್ನು ತೊರೆಯುತ್ತವೆ. ಮೊಸಳೆಗಳು ಕಾಲುವೆಗಳ ಮೂಲಕ ಒಂದು ಜಲಮೂಲದಿಂದ ಮತ್ತೊಂದೆಡೆ ಸಂಚರಿಸುತ್ತವೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.