ಭೋಪಾಲ್:ರಾಜಸ್ಥಾನ, ಛತ್ತೀಸಗಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿಗದಿಯಂತೆ 8 ಗಂಟೆಗೆ ಆರಂಭಗೊಳ್ಳಲಿದೆ. ಆದರೆ,ಮಧ್ಯಪ್ರದೇಶದಲ್ಲಿ ಮಾತ್ರ ಮತ ಎಣಿಕೆ ಎರಡು ಗಂಟೆ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ.
ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ಚಲಾಯಿಸಿರುವ ಮತವನ್ನು ಖಾತರಿಗೊಳಿಸುವುದಕ್ಕೆ ಬಳಸಲಾಗುವ ವಿವಿಪ್ಯಾಟ್ (ವಿವಿಪಿಎಟಿ- ವೋಟರ್ ವೈರಿಫೈಡ್ ಪೇಪರ್ ಆಡಿಟ್ ಟ್ರೈಲ್) ಅನ್ನು ಇದೇ ಮೊದಲ ಬಾರಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗಿದೆ. 230 ಕ್ಷೇತ್ರಗಳಎಲ್ಲ ಮತಗಟ್ಟೆಗಳಲ್ಲೂವಿವಿಪ್ಯಾಟ್ ಬಳಸಲಾಗಿದೆ. ವಿವಿಪ್ಯಾಟ್ ಮರುಪರಿಶೀಲನೆ ನಡೆಸಲಾಗುವುದರಿಂದ ಮತ ಎಣಿಕೆ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ 306 ಮತ ಎಣಿಕೆ ಕೇಂದ್ರಗಳಿದ್ದು, ಮೀಸಲು ಸಿಬ್ಬಂದಿಯೂ ಸೇರಿದಂತೆ 14,600 ಮತ ಎಣಿಕೆ ಸಿಬ್ಬಂದಿ ಇದ್ದಾರೆ.
ಇದನ್ನೂ ಓದಿ:ದಿಕ್ಸೂಚಿ ಚುನಾವಣೆ ಇಂದು ಫಲಿತಾಂಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.