ADVERTISEMENT

ಅಡ್ಡಮತದಾನ ಮಾಡಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ವಾಪಸ್‌

ಪಿಟಿಐ
Published 28 ಫೆಬ್ರುವರಿ 2024, 11:19 IST
Last Updated 28 ಫೆಬ್ರುವರಿ 2024, 11:19 IST
   

ಪಂಚಕುಲ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಬಿಜೆಪಿಗೆ ಮತ ಹಾಕಿ ಅಜ್ಞಾತ ಸ್ಥಳ ಸೇರಿಕೊಂಡಿದ್ದ ಕಾಂಗ್ರೆಸ್‌ನ ಆರು ಶಾಸಕರು ಶಿಮ್ಲಾಗೆ ಆಗಮಿಸಿದ್ದಾರೆ.

ಇವರಲ್ಲಿ ಮೂವರು ಪಕ್ಷೇತರ ಶಾಸಕರೂ ಸೇರಿದ್ದಾರೆ. ಕಾಂಗ್ರೆಸ್‌ನ ಆರು, ಪಕ್ಷೇತರ 3 ಶಾಸಕರು ಸೇರಿ ಒಟ್ಟು 9 ಶಾಸಕರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಅವರ ಗೆಲುವಿಗೆ ಕಾರಣರಾಗಿದ್ದರು. 

ಈ 9 ಶಾಸಕರು ವಿಧಾನಸಭೆಗೆ ಬರುತ್ತಿದ್ದಂತೆ, ‘ಜೈ ಶ್ರೀರಾಮ್‌, ಕೆಲಸ ಮುಗಿದಿದೆ’ ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿ ಅವರನ್ನು ಸ್ವಾಗತಿಸಿದ್ದಾರೆ.

ADVERTISEMENT

ರಾಜಿಂದರ್‌ ರಾಣಾ, ರವಿ ಠಾಕೂರ್‌ ಸೇರಿದಂತೆ 6 ಶಾಸಕರು ನಿನ್ನೆ ಮತದಾನ ಮುಗಿಯುವ ಹಂತದಲ್ಲಿ ನಾಪತ್ತೆಯಾಗಿ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇತ್ತ ಮುಖ್ಯಮಂತ್ರಿ ಸುಖ್ವಿಂದರ್ ಸುಖು ತಮ್ಮ ಶಾಸಕರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದರು.

ವರದಿ ಪ್ರಕಾರ, ಸುಖು ಅವರ ಆಡಳಿತ ವೈಖರಿಯಿಂದ ಶಾಸಕರು ಬೇಸರಗೊಂಡಿದ್ದು, ಅವರ ಹುದ್ದೆಯಲ್ಲಿ ಬದಲಾವಣೆ ಮಾಡಲು ಬಯಸುತ್ತಿದ್ದರು, ಹೀಗಾಗಿ ಅಡ್ಡಮತದಾನ ಮಾಡಿ ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.