ಬೆಂಗಳೂರು:ಲೋಕಸಭೆ ಚುನಾವಣೆಗೆ ಸಂಬಂಧಿಸಿ ಕಳೆದ ಕೆಲವು ದಿನಗಳಲ್ಲಿ ಹಲವು ಸಮೀಕ್ಷೆಗಳು ಪ್ರಕಟಗೊಂಡಿವೆ. ಈ ಪೈಕಿ ಹೆಚ್ಚಿನ ಸಮೀಕ್ಷೆಗಳು ಈ ಬಾರಿ 272ರ ಗಡಿ ದಾಟುವುದು ಬಿಜೆಪಿಗೆ ಕಷ್ಟವಾಗಲಿದೆ ಎಂದು ಹೇಳಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೇರಲಿದೆ ಎಂದು ಮಾರ್ಚ್ ಮೊದಲ ವಾರದ ಸಮೀಕ್ಷೆಯೊಂದರಲ್ಲಿ ಹೇಳಲಾಗಿತ್ತು. ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಸ್ಥಾನಗಳ ಸಂಖ್ಯೆಯೂ ಹೆಚ್ಚಾಗಲಿದೆ. ಬಿಜೆಪಿಗೆ ಬಹುಮತಕ್ಕೆಎಂಟು ಸ್ಥಾನಗಳು ಕಡಿಮೆಯಾಗಲಿವೆ ಎಂದು ಮತ್ತೊಂದು ಸಮೀಕ್ಷಾ ವರದಿ ತಿಳಿಸಿತ್ತು.
ಭಾನುವಾರಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಮೀಕ್ಷೆ ಬಹಿರಂಗಪಡಿಸಿದ ‘ಇಂಡಿಯಾ ಟಿವಿ–ಸಿಎನ್‌ಎಕ್ಸ್’, ಎನ್‌ಡಿಎ ಈ ಬಾರಿ 285 ಸ್ಥಾನ ಗಳಿಸಲಿದೆ ಎಂದು ಹೇಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 126 ಮತ್ತು ಇತರ ಪಕ್ಷಗಳಾದ ಟಿಎಂಸಿ, ಎಸ್‌ಪಿ, ಬಿಎಸ್‌ಪಿ ಮತ್ತು ಟಿಆರ್‌ಎಸ್‌ಗಳು 132 ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಆದಾಗ್ಯೂ, ಎನ್‌ಡಿಎ ಈ ಬಾರಿ 264 ಕ್ಷೇತ್ರಗಳಲ್ಲಷ್ಟೇ ಜಯ ಸಾಧಿಸಲಿದೆ. ಯುಪಿಎಗೆ 141 ಮತ್ತು ಇತರ ಪಕ್ಷಗಳಿಗೆ 138 ಸ್ಥಾನಗಳು ದೊರೆಯಲಿವೆ ಎಂದು ‘ಎಬಿಪಿ ನ್ಯೂಸ್–ಸಿವೋಟರ್’ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಮೊದಲ ಹಂತದ ಚುನಾವಣೆ: ಸತತ ರಜೆ!
ಬಿಜೆಪಿಯ ಸ್ಥಾನ 282ರಿಂದ 238ಕ್ಕೆ ಕುಸಿಯಲಿದೆ ಎಂದು ‘ಇಂಡಿಯಾ ಟಿವಿ–ಸಿಎನ್‌ಎಕ್ಸ್’ ಸಮೀಕ್ಷೆ ಹೇಳಿದ್ದರೆ, ‘ಎಬಿಪಿ ನ್ಯೂಸ್–ಸಿವೋಟರ್’ ಸಮೀಕ್ಷೆಯಲ್ಲಿ ಬಿಜೆಪಿಗೆ ಕೇವಲ 220 ಸ್ಥಾನ ನೀಡಲಾಗಿದೆ. ಉಪ ಚುನಾವಣೆಗಳಲ್ಲಿ ಸೋಲನುಭವಿಸಿದ ಪರಿಣಾಮ ಸದ್ಯ ಲೋಕಸಭೆಯಲ್ಲಿ ಬಿಜೆಪಿ 269 ಸ್ಥಾನಗಳನ್ನಷ್ಟೇ ಹೊಂದಿದೆ.
ಇಂಡಿಯಾ ಟಿವಿ–ಸಿಎನ್‌ಎಕ್ಸ್ ಸಮೀಕ್ಷೆ |
ಪಕ್ಷ | ಸ್ಥಾನ |
ಬಿಜೆಪಿ | 238 |
ಕಾಂಗ್ರೆಸ್ | 82 |
ತೃಣಮೂಲ ಕಾಂಗ್ರೆಸ್ | 30 |
ವೈಎಸ್‌ಆರ್ಕಾಂಗ್ರೆಸ್ | 22 |
ಎಸ್‌ಪಿ | 18 |
ಬಿಎಸ್‌ಪಿ | 16 |
ಡಿಎಂಕೆ | 16 |
ಬಿಜೆಡಿ | 14 |
ಟಿಆರ್‌ಎಸ್ | 14 |
ಎಐಎಡಿಎಂಕೆ | 12 |
ಜೆಡಿ(ಯು) | 12 |
ಶಿವಸೇನಾ | 10 |
ಆರ್‌ಜೆಡಿ | 8 |
ಎನ್‌ಸಿಪಿ | 7 |
ಎಡಪಕ್ಷಗಳು | 6 |
ಸಣ್ಣ ಪಕ್ಷಗಳು ಮತ್ತು ಪಕ್ಷೇತರರು | 38 |
ಕಾಂಗ್ರೆಸ್ ಪಕ್ಷ ಈ ಬಾರಿಯೂ 100ರ ಗಡಿ ದಾಟುವುದಿಲ್ಲ ಎಂದು ಎರಡೂ ಸಮೀಕ್ಷೆಗಳು ಹೇಳಿವೆ. ಕಳೆದ ಬಾರಿ 44 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 82 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು‘ಇಂಡಿಯಾ ಟಿವಿ–ಸಿಎನ್‌ಎಕ್ಸ್’ ಸಮೀಕ್ಷೆ ಹೇಳಿದೆ. ಮತ್ತೊಂದು ಸಮೀಕ್ಷೆ ಕಾಂಗ್ರೆಸ್‌ಗೆ 86 ಸ್ಥಾನ ದೊರೆಯಲಿದೆ ಎಂದಿದೆ.
‘ಇಂಡಿಯಾ ಟಿವಿ–ಸಿಎನ್‌ಎಕ್ಸ್’ ಸಮೀಕ್ಷೆ ಪ್ರಕಾರ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯ ಪರಿಣಾಮವಾಗಿ ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ದೆಹಲಿಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಗಳಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 13 ಮತ್ತು ಜೆಡಿಎಸ್ 2 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ ಈ ಹಿಂದೆ ಅಂದಾಜಿಸಿದಷ್ಟು ಪರಿಣಾಮ ಬೀರದು ಎಂದೂ ಹೇಳಲಾಗಿದೆ.
ಎಬಿಪಿ ನ್ಯೂಸ್–ಸಿವೋಟರ್ ಸಮೀಕ್ಷೆ |
ಪಕ್ಷ | ಸ್ಥಾನ |
ಬಿಜೆಪಿ | 220 |
ಕಾಂಗ್ರೆಸ್ | 86 |
ಡಿಎಂಕೆ | 30 |
ಜೆಡಿಯು–ಎಲ್‌ಜೆಪಿ | 20 |
ಶಿವಸೇನಾ | 14 |
ಎನ್‌ಸಿಪಿ | 6 |
ವೈಎಸ್‌ಆರ್ ಕಾಂಗ್ರೆಸ್ | 11 |
ಬಿಜೆಡಿ | 9 |
ಟಿಆರ್‌ಎಸ್ | 9 |
ಯಪಿಎ ಇತರ ಪಕ್ಷಗಳು | 19 |
ಎನ್‌ಡಿಎ ಇತರ ಪಕ್ಷಗಳು | 10 |
ಉತ್ತರ ಪ್ರದೇಶದಲ್ಲಿ ಕಳೆದ ಬಾರಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಈ ಬಾರಿ 40 ಸ್ಥಾನ ಮಾತ್ರ ದೊರೆಯಲಿದೆ. ಬಿಎಸ್‌ಪಿಗೆ 16 ಮತ್ತು ಎಸ್‌ಪಿಗೆ 18 ಸ್ಥಾನ ಲಭಿಸಲಿದೆ. ಆದರೆ ಎಬಿಪಿ ಸಮೀಕ್ಷೆ ಪ್ರಕಾರ, ಎಸ್‌ಪಿ–ಬಿಎಸ್‌ಪಿ ಮೈತ್ರಿ 47 ಮತ್ತು ಬಿಜೆಪಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.
ಇದನ್ನೂ ಓದಿ:ದೂರು ನೀಡಲು ಆಯೋಗದ ಸಿ– ವಿಜಿಲ್ ಆ್ಯಪ್
‘ಇಂಡಿಯಾ ಟಿವಿ–ಸಿಎನ್‌ಎಕ್ಸ್’ ಸಮೀಕ್ಷೆ ಪ್ರಕಾರ, ಬಿಹಾರದಲ್ಲಿ ಬಿಜೆಪಿ–ಜೆಡಿಯು ಮೈತ್ರಿಕೂಟ 30 ಸ್ಥಾನ ಗಳಿಸಲಿದೆ. 8 ಕ್ಷೇತ್ರ ಆರ್‌ಜೆಡಿಗೆ 2 ಕಾಂಗ್ರೆಸ್‌ಗೆ ದೊರೆಯಲಿದೆ. ರಾಜಸ್ಥಾನದಲ್ಲಿ 25 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 5ರಲ್ಲಷ್ಟೇ ಗೆಲ್ಲಲಿದೆ. ಉಳಿದವು ಬಿಜೆಪಿ ಪಾಲಾಗಲಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ 23 ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಲಿದ್ದು, ಕಾಂಗ್ರೆಸ್‌ಗೆ ಕೇವಲ 6 ಸ್ಥಾನ ದೊರೆಯಲಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 12, ತೃಣಮೂಲ ಕಾಂಗ್ರೆಸ್ (ಟಿಎಂಸಿ) 30 ಕಡೆ ಗೆಲ್ಲಲಿದೆ.
ರಾಜ್ಯವಾರು ಸ್ಥಾನ (ಇಂಡಿಯಾ ಟಿವಿ–ಸಿಎನ್‌ಎಕ್ಸ್) |
ರಾಜ್ಯ (ಒಟ್ಟು ಕ್ಷೇತ್ರ) | ಪಕ್ಷಗಳು, ಸ್ಥಾನ |
ಕರ್ನಾಟಕ (28) | ಬಿಜೆಪಿ 13, ಕಾಂಗ್ರೆಸ್ 13, ಜೆಡಿಎಸ್ 2 |
ಆಂಧ್ರ ಪ್ರದೇಶ (25) | ವೈಎಸ್‌ಆರ್ ಕಾಂಗ್ರೆಸ್ 22, ಟಿಡಿಪಿ 3, ಕಾಂಗ್ರೆಸ್ 0 |
ಅಸ್ಸಾಂ (14) | ಬಿಜೆಪಿ 8, ಎಐಯುಡಿಎಫ್ 2, ಕಾಂಗ್ರೆಸ್ 4 |
ಛತ್ತೀಸಗಡ (11) | ಬಿಜೆಪಿ 6, ಕಾಂಗ್ರೆಸ್ 5 |
ಗುಜರಾತ್ (26) | ಬಿಜೆಪಿ 26, ಕಾಂಗ್ರೆಸ್ 0 |
ಗೋವಾ (2) | ಬಿಜೆಪಿ 2, ಕಾಂಗ್ರೆಸ್ 0 |
ಹರಿಯಾಣ (10) | ಬಿಜೆಪಿ 9, ಕಾಂಗ್ರೆಸ್ 1 |
ಜಾರ್ಖಂಡ್ (14) | ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್ 2, ಜೆವಿಎಂಪಿ 1 |
ಹಿಮಾಚಲ ಪ್ರದೇಶ (4) | ಬಿಜೆಪಿ 4, ಕಾಂಗ್ರೆಸ್ 0 |
ಜಮ್ಮು ಮತ್ತು ಕಾಶ್ಮೀರ (6) | ಬಿಜೆಪಿ 2, ಎನ್‌ಸಿ 1, ಕಾಂಗ್ರೆಸ್ 2, ಪಿಡಿಪಿ 1 |
ಕೇರಳ (20) | ಯುಡಿಎಫ್ 12, ಎಲ್‌ಡಿಎಫ್ 7, ಬಿಜೆಪಿ 1 |
ಮಹಾರಾಷ್ಟ್ರ (48) | ಬಿಜೆಪಿ 22, ಶಿವಸೇನಾ 10, ಕಾಂಗ್ರೆಸ್ 9, ಎನ್‌ಸಿಪಿ 7 |
ಮಧ್ಯ ಪ್ರದೇಶ (29) | ಬಿಜೆಪಿ 23, ಕಾಂಗ್ರೆಸ್ 6 |
ಒಡಿಶಾ (21) | ಬಿಜೆಡಿ 14, ಬಿಜೆಪಿ 7 |
ಪಂಜಾಬ್ (13) | ಕಾಂಗ್ರೆಸ್ 9, ಅಕಾಲಿ ದಳ 3, ಎಎಪಿ 1, ಬಿಜೆಪಿ 0 |
ರಾಜಸ್ಥಾನ (25) | ಬಿಜೆಪಿ 20, ಕಾಂಗ್ರೆಸ್ 5 |
ಉತ್ತರ ಪ್ರದೇಶ (80) | ಬಿಜೆಪಿ 40, ಬಿಎಸ್‌ಪಿ 16, ಎಸ್‌ಪಿ 18, ಕಾಂಗ್ರೆಸ್ 4, ಆರ್‌ಎಲ್‌ಡಿ 1, ಅಪ್‌ನಾ ದಳ 1 |
ಉತ್ತರಾಖಂಡ (5) | ಬಿಜೆಪಿ 5 |
ತಮಿಳುನಾಡು (39) | ಡಿಎಂಕೆ 16, ಎಐಎಡಿಎಂಕೆ 12, ಎಎಂಎಂಕೆ 2, ಕಾಂಗ್ರೆಸ್ 5, ಬಿಜೆಪಿ 1, ಇತರರು 1 |
ತೆಲಂಗಾಣ (17) | ಟಿಆರ್‌ಎಸ್ 14, ಎಐಎಂಐಎಂ 1, ಕಾಂಗ್ರೆಸ್ 2 |
ಪಶ್ಚಿಮ ಬಂಗಾಳ (42) | ಟಿಎಂಸಿ 30, ಬಿಜೆಪಿ 12 |
ಇತರ ಈಶಾನ್ಯ ರಾಜ್ಯಗಳು (11) | ಬಿಜೆಪಿ 3, ಕಾಂಗ್ರೆಸ್ 3, ಎಂಎನ್‌ಎಫ್ 1, ಎನ್‌ಪಿಪಿ 1, ಸಿಪಿಐಎಂ 1, ಎನ್‌ಡಿಪಿಪಿ 1, ಎಸ್‌ಡಿಎಫ್ 1 |
ಇತರ ಕೇಂದ್ರಾಡಳಿತ ಪ್ರದೇಶಗಳು (6) | ಬಿಜೆಪಿ 4, ಕಾಂಗ್ರೆಸ್ 2 |
ದೆಹಲಿ (7) | ಬಿಜೆಪಿ 7, ಕಾಂಗ್ರೆಸ್ 0, ಎಎಪಿ 0 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.