ನವದೆಹಲಿ: ವಿಶೇಷ ಕಾರ್ಯಾಚರಣೆ ಕೈಗೊಳ್ಳುವ ಕಮಾಂಡೊ ಪಡೆ ‘ಕೋಬ್ರಾ’ಗೆ ಮಹಿಳೆಯರನ್ನು ಸಹ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ ಗುರುವಾರ ತಿಳಿಸಿದ್ದಾರೆ.
ಬೇಹುಗಾರಿಕೆ ಆಧಾರಿತ ಯುದ್ಧ ಕಾರ್ಯಾಚರಣೆಗೆ 12 ಸಾವಿರ ಯೋಧರನ್ನೊಳಗೊಂಡ ಪಡೆಯನ್ನು ಸಿಆರ್‌ಪಿಎಫ್ 2009ರಲ್ಲಿ ಆರಂಭಿಸಿತ್ತು. ‘ಕೋಬ್ರಾ’ ಪಡೆಯ ಬಹುತೇಕ ತಂಡಗಳನ್ನು ನಕ್ಸಲ್ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಕೆಲವು ಯೋಧರನ್ನು ಈಶಾನ್ಯ ರಾಜ್ಯಗಳಿಗೂ ನಿಯೋಜಿಸಲಾಗಿದೆ.
ಕೋಬ್ರಾ ಪಡೆಗೆ ಸೇರುವ ಯೋಧರು ಅತ್ಯುತ್ತಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕವಾಗಿ ಸದೃಢವಾಗಿದ್ದು, ಅತ್ಯಂತ ಕಠಿಣ ಮಾನದಂಡಗಳನ್ನು ಪೂರೈಸಿರುತ್ತಾರೆ.
ಸಿಆರ್‌ಪಿಎಫ್‌ನಲ್ಲಿ 1986ರಿಂದ ಮಹಿಳಾಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಸದ್ಯ ಆರು ಮಹಿಳಾ ಘಟಕಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.