ADVERTISEMENT

ಒಡಿಶಾ | ಬಾಲೇಶ್ವರದಲ್ಲಿ ಗುಂಪು ಘರ್ಷಣೆ, ಕರ್ಫ್ಯೂ ಹೇರಿಕೆ

ಪಿಟಿಐ
Published 18 ಜೂನ್ 2024, 5:51 IST
Last Updated 18 ಜೂನ್ 2024, 5:51 IST
   

ಬಾಲೇಶ್ವರ: ಒಡಿಶಾದ ಬಾಲೇಶ್ವರ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಕರ್ಫ್ಯೂ ಹೇರಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪಟ್ಟಣದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟೆರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಜನರಲ್ಲಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.

ಕರ್ಫ್ಯೂ ಜೂನ್ 17ರ ಮಧ್ಯರಾತ್ರಿಯಿಂದ ಜೂನ್ 18ರ ಮಧ್ಯರಾತ್ರಿಯವರೆಗೂ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸೋಮವಾರ ಬಾಲೇಶ್ವರದ ಜಿಲ್ಲಾಧಿಕಾರಿ ಆಶಿಶ್ ಠಾಕರೆ ಅವರೊಂದಿಗೆ ಮಾತನಾಡಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬೇಕಾಗಿರುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಭುಜಖಿಯಾ ಪಿರ್ ಪ್ರದೇಶದಲ್ಲಿ ಪ್ರಾಣಿಬಲಿಯ ರಕ್ತವನ್ನು ರಸ್ತೆಗೆ ಚೆಲ್ಲಿರುವುದನ್ನು ಪ್ರತಿಭಟಿಸಿ ಗುಂಪೊಂದು ಧರಣಿ ನಡೆಸಿತ್ತು. ಇನ್ನೊಂದು ಗುಂಪು, ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಆಪಾದಿಸಿದೆ. ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 30 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.