ADVERTISEMENT

ಶಿವಸೇನಾ (UTB) ಜೊತೆ ಮೈತ್ರಿ ಕಡಿದುಕೊಂಡ ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ ವಿಬಿಎ

ಪಿಟಿಐ
Published 8 ಜುಲೈ 2024, 3:12 IST
Last Updated 8 ಜುಲೈ 2024, 3:12 IST
<div class="paragraphs"><p>ಪ್ರಕಾಶ್ ಅಂಬೇಡ್ಕರ್</p></div>

ಪ್ರಕಾಶ್ ಅಂಬೇಡ್ಕರ್

   

– ಪಿಟಿಐ ಚಿತ್ರ

ಛತ್ರಪತಿ ಸಾಂಭಾಜಿನಗರ: ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಅಂತ್ಯವಾಗಿದೆ ಎಂದು ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್‌ ಭಾನುವಾರ ತಿಳಿಸಿದ್ದಾರೆ.

ADVERTISEMENT

ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ವಿಬಿಎ ಕಳೆದ ಲೋಕಸಭೆ ಚುನಾವಣೆ ವೇಳೆ ಸೀಟು ಹಂಚಿಕೆ ಸಂಬಂಧ ಉಂಟಾದ ಅಸಮಾಧಾನದ ಬಳಿಕ ಮೈತ್ರಿಯಿಂದ ಹೊರಗೆ ಬಂದಿತ್ತು. ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಮೊದಲು ವಿಬಿಎ ಶಿವಸೇನಾ (ಯುಟಿಬಿ) ಜೊತೆ ಮೈತ್ರಿ ಮಾಡಿಕೊಂಡಿತ್ತು.

‘ಮೈತ್ರಿ ಅಂತ್ಯವಾಗಿದೆ. ಇನ್ನು ಏನೂ ಉಳಿದಿಲ್ಲ’ ಎಂದು ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.

ಶಿವಸೇನಾ (ಯುಟಿಬಿ) ಹಾಗೂ ವಿಬಿಎ ನಡುವೆ 2023ರ ಜನವರಿಯಲ್ಲಿ ಮೈತ್ರಿ ಏರ್ಪಟ್ಟಿತ್ತು

ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಪ್ರಕಾಶ್‌ ಅಂಬೇಡ್ಕರ್‌ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕೋಲಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಅನುಪ್ ಧೋತ್ರೆ ವಿರುದ್ಧ ಸೋಲನುಭವಿಸಿದ್ದರು.

ಉದ್ಧವ್ ಠಾಕ್ರೆ ಅವರ ತಾತ ಕೇಶವ್‌ ಠಾಕ್ರೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಸಮಕಾಲೀನರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದರು ಎಂದು ಉದ್ಧವ್ ಮೈತ್ರಿ ವೇಳೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.