ADVERTISEMENT

ಹಾಲಿನ ಪೊಟ್ಟಣದಲ್ಲಿ 4 ಕೆ.ಜಿ. ಚಿನ್ನ!: ಬೆಕ್ಕಸ ಬೆರಗಾದ ಕಸ್ಟಮ್ಸ್ ಅಧಿಕಾರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2023, 9:41 IST
Last Updated 21 ನವೆಂಬರ್ 2023, 9:41 IST
<div class="paragraphs"><p>ಹಾಲಿನ ಪೇಯದ ಪೊಟ್ಟಣದಲ್ಲಿ ಚಿನ್ನದ ತುಂಡುಗಳು</p></div>

ಹಾಲಿನ ಪೇಯದ ಪೊಟ್ಟಣದಲ್ಲಿ ಚಿನ್ನದ ತುಂಡುಗಳು

   

ನವದೆಹಲಿ: ದೆಹಲಿ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕರೊಬ್ಬರ ಸೂಟ್‌ಕೇಸ್‌ನಲ್ಲಿ ಸಹಜವಾಗಿ ಇರಬಹುದಾದ ಹಾಲಿನ ಪೇಯದ ಪೊಟ್ಟಣ ಇತ್ತು. ದ್ರವ ರೂಪದಲ್ಲಿರಬೇಕಾದ ಪೊಟ್ಟಣ ಘನರೂಪದಲ್ಲಿತ್ತು. ಕೊಂಚ ತೂಕವೂ ಹೆಚ್ಚಿತ್ತು. ತೆರೆದು ನೋಡಿದ ಕಸ್ಟಮ್ಸ್ ಅಧಿಕಾರಿಗಳು ಬೆಕ್ಕಸ ಬೆರಗಾಗಿದ್ದರು.

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿ ಬರೋಬ್ಬರಿ 4.204 ಕೆ.ಜಿ. ಚಿನ್ನವನ್ನು ಇದೇ ರೀತಿಯಲ್ಲಿ ಕದ್ದು ತರುವ ಪ್ರಯತ್ನ ನಡೆಸಿದ್ದರು. ಚಿನ್ನದ ಬಾರ್‌ ಅನ್ನು ತುಂಡರಿಸಿ, ಹಾಲಿನ ಪೇಯದ ಪೊಟ್ಟಣದೊಳಗೆ ಸೇರಿಸಿದ್ದರು. ನೋಡಿದವರಿಗೆ ಸಹಜ ಪೊಟ್ಟಣದಂತೆ ಕಾಣುವಂತೆ ಅದನ್ನು ಸಿದ್ಧಪಡಿಸಲಾಗಿತ್ತು.

ADVERTISEMENT

ವಿದೇಶದಿಂದ ಬಂದಿಳಿದ ವ್ಯಕ್ತಿಯ ಸೂಟ್‌ಕೇಸ್‌ ಪರಿಶೀಲಿಸಿದ ಅಧಿಕಾರಿಗಳು ಸಹಜ ಎನ್ನುವಂತೆ ಪೇಯದ ಪೊಟ್ಟಣವನ್ನೂ ಹೊರಕ್ಕೆ ತೆಗೆದಿಡಲು ಮುಂದಾಗಿದ್ದರು. ಆದರೆ ಅದರ ಅಸಹಜತೆ ಸಂಶಯಕ್ಕೆ ಕಾರಣವಾಗಿತ್ತು. ಅದನ್ನು ತೆರೆದಾಗ, ಚಿನ್ನದ ಗಟ್ಟಿಗಳು ಒಂದೊಂದಾಗಿ ಸಿಗಲಾರಂಭಿಸಿತು.

ದೆಹಲಿ ವಿಮಾನ ನಿಲ್ದಾಣದಲ್ಲಿ ದೊರೆತ ಚಿನ್ನಡ ಗಟ್ಟಿಯ ಒಟ್ಟು ಮೌಲ್ಯ ₹2.24 ಕೋಟಿ ಎಂದು ಅಂದಾಜಿಸಲಾಗಿದೆ.  ಕಸ್ಟಮ್ಸ್ ಕಾಯ್ದೆಯಡಿ ದೂರು ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.