ಬೆಂಗಳೂರು: ಗಾರ್ಮೆಂಟ್ಸ್ ಹೆಸರಿನಲ್ಲಿ ದುಬೈನಿಂದ ಭಾರತಕ್ಕೆ ತರಲಾಗುತ್ತಿದ್ದ ₹1 ಕೋಟಿ ಮೌಲ್ಯದ 90 ಐಫೋನ್‌ಗಳನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಸುಂಕ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ದೆಹಲಿ ಏರ್‌ಪೋರ್ಟ್‌ನ ಹೊಸ ಕೊರಿಯರ್ ಟರ್ಮಿನಲ್‌ಗೆ ದುಬೈನಿಂದ ಬಂದ ಮೂರು ಪ್ರತ್ಯೇಕ ಪ್ಯಾಕೇಜ್‌ಗಳ ಪರಿಶೀಲನೆ ಸಂದರ್ಭದಲ್ಲಿ ಈ ವಂಚನೆ ಪತ್ತೆಯಾಗಿದೆ.
ಎಕ್ಸ್ ರೇ ಸ್ಕ್ಯಾನ್ ವಿಭಾಗದ ಅಧಿಕಾರಿಯೋರ್ವರು ಗಾರ್ಮೆಂಟ್ಸ್ ಹೆಸರಿನ ಪ್ಯಾಕೇಜ್‌ನಲ್ಲಿ ಐಫೋನ್‌ಗಳು ಇರುವುದನ್ನು ಗಮನಿಸಿದ್ದಾರೆ.
ಮೂರು ಪ್ಯಾಕ್‌ಗಳಲ್ಲಿ ಒಟ್ಟು 90 ಆ್ಯಪಲ್ ಐಫೋನ್ 12 ಪ್ರೊ ಸಾಗಿಸಲಾಗುತ್ತಿತ್ತು ಎಂದು ಏರ್ ಕಾರ್ಗೋ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.