ಹೈದರಾಬಾದ್: ಶಾಲೆಗೆ ಹೋಗುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಸೈಬರ್ ಅಂಬಾಸಿಡರ್ಸ್ ಪ್ಲಾಟ್‌ಫಾರ್ಮ್' (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ ಎಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತೆಲಂಗಾಣ ಮಹಿಳಾ ಪೊಲೀಸ್ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಸೈಬರ್ ಅಂಬಾಸಿಡರ್ಸ್ ಪ್ಲಾಟ್‌ಫಾರ್ಮ್ ಅಗತ್ಯವಾಗಿದೆ ಎಂದರು.
ಪೊಲೀಸ್ ಮಹಾ ನಿರ್ದೇಶಕರಾದ ಅಂಜನಿ ಕುಮಾರ್ ಮಾತನಾಡಿ,’ ತೆಲಂಗಾಣ ಪೊಲೀಸರು ತಂತ್ರಜ್ಞಾನ ಮತ್ತು ಸುರಕ್ಷತೆಯ ವಿಷಯದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ. ಯುವ ಪೀಳಿಗೆಯು ಸೈಬರ್ ರಾಯಭಾರಿಗಳಾಗಿ, ಸುರಕ್ಷಿತ ಸಮುದಾಯಕ್ಕಾಗಿ ಕೆಲಸ ಮಾಡುವುದು ಜವಾಬ್ದಾರಿಯಾಗಿದೆ. ಮಕ್ಕಳು ಡಿಜಿಟಲ್ ಶಿಷ್ಟಾಚಾರದ ಬಗ್ಗೆ ತಿಳಿದಿರಬೇಕು’ ಎಂದು ಹೇಳಿದರು.
ತೆಲಂಗಾಣದ 33 ಜಿಲ್ಲೆಗಳಿಂದ 2,381 ಶಾಲೆಗಳಲ್ಲಿ 9,424 ಸೈಬರ್ ರಾಯಭಾರಿಗಳಿಗೆ ತರಬೇತಿ ನೀಡಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.