ADVERTISEMENT

ಮಾನವ ಕಳ್ಳಸಾಗಣೆ: ದೋಷಾರೋಪ ಪಟ್ಟಿ ಸಲ್ಲಿಸಿದ ಎನ್‌ಐಎ

ಪಿಟಿಐ
Published 10 ಅಕ್ಟೋಬರ್ 2024, 13:51 IST
Last Updated 10 ಅಕ್ಟೋಬರ್ 2024, 13:51 IST
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)   

ನವದೆಹಲಿ: ಸೈಬರ್ ಅಪರಾಧಗಳಲ್ಲಿ ಬಳಸಿಕೊಳ್ಳಲು ಭಾರತೀಯರನ್ನು ಲಾವೋಸ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ತಂಡದ ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದೋಷಾರೋಪ ಪಟ್ಟಿ ಸಲ್ಲಿಸಿದೆ.

ಯುರೋಪ್ ಹಾಗೂ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧ ಕೃತ್ಯ ನಡೆಸುವ ಚೀನೀಯರು, ಕಳ್ಳಸಾಗಣೆ ಮೂಲಕ ಲಾವೋಸ್‌ಗೆ ಕರೆತಂದ ಭಾರತೀಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಎನ್‌ಐಎ ಹೇಳಿದೆ.

ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ತಂಡದ ಸದಸ್ಯರಾದ ಮಂಜೂರ್ ಆಲಂ ಅಲಿಯಾಸ್ ಗುಡ್ಡು, ಸಾಹಿಲ್, ಆಶಿಷ್ ಅಲಿಯಾಸ್ ಅಖಿಲ್, ಪವನ್ ಯಾದವ್ ಅಲಿಯಾಸ್ ಅಫ್ಜಲ್ ಅಲಿಯಾಸ್ ಅಫ್ರೋಜ್‌ ಎನ್ನುವರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಮುಖ ಪಿತೂರಿಕೋರ ಕಮ್ರನ್ ಹೈದರ್‌ ಅಲಿಯಾಸ್ ಜೈದಿ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ADVERTISEMENT

‘ಅಮಾಯಕ ಭಾರತೀಯರನ್ನು ಲಾವೋಸ್‌ಗೆ ಕಳ್ಳಸಾಗಣೆ ಮಾಡುವ ಕೆಲಸದಲ್ಲಿ ಈ ಐವರು ಭಾಗಿಯಾಗಿದ್ದರು ಎಂಬುದನ್ನು ಎನ್‌ಐಎ ತನಿಖೆಯು ಪತ್ತೆ ಮಾಡಿದೆ. ಅಲ್ಲಿ ಅವರನ್ನು ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಒತ್ತಾಯದಿಂದ ತೊಡಗಿಸಿಕೊಳ್ಳಲಾಗುತ್ತಿತ್ತು’ ಎಂದು ಎನ್‌ಐಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.