ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರವೇಶಿಸುತ್ತಿದ್ದಂತೆ ಫೋನಿ ಚಂಡಮಾರುತಬಿರುಸುಗೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶುಕ್ರವಾರ ಬೆಳಗ್ಗೆ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫೋನಿ, ಸಂಜೆ ಹೊತ್ತಿಗೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದೆ.ಈಗಾಗಲೇ ಫೋನಿ ಆರ್ಭಟದಿಂದ ಹಲವಾರು ನಾಶ ನಷ್ಟ ಸಂಭವಿಸಿದ್ದು, ಅದರ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದೆ.ಬಂಗಾಳ ಪ್ರವೇಶಿಸಿ ಕೋಲ್ಕತ್ತಗೆ ಧಾವಿಸುವ ಹೊತ್ತಲ್ಲಿ ಚಂಡಮಾರುತ ಬಿರುಸುಗೊಂಡಿದೆ ಎಂದು ರಾಷ್ಟ್ರೀಯ ಹಮಾಮಾನ ಇಲಾಖೆ ಕೋಲ್ಕತ್ತದ ಉಪ ನಿರ್ದೇಶಕ ಸಂಜೀಬ್ ಬಂದೋಪಧ್ಯಾಯ್ ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವ ಹೊತ್ತಲ್ಲಿ ಚಂಡಮಾರುತದ ವೇಗ ಗಂಟೆಗೆ 90-110/115 ಕಿ.ಮಿನಷ್ಟಿರಲಿದೆ ಎಂದು ಬಂದೋಪಾಧ್ಯಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.