ADVERTISEMENT

ಫೋನಿ ಅಬ್ಬರ: ಹಾರಿ ಹೋಯಿತು ಏಮ್ಸ್‌ ಹಾಸ್ಟೆಲ್ ಛಾವಣಿ, ಭರದಿಂದ ಸಾಗಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 10:51 IST
Last Updated 3 ಮೇ 2019, 10:51 IST
   

ಒಡಿಶಾದಲ್ಲಿ ಫೋನಿ ಅಬ್ಬರ ಜೋರಾಗಿದೆ. ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸಾವಿರಾರು ಮರಗಳು ಸೇರಿದಂತೆ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.ಒಡಿಶಾ ಮಾತ್ರವಲ್ಲದೆ ಆಂಧ್ರ ಹಾಗೂ ಪಶ್ಚಿಮ ಬಂಗಾಳ ಕರಾವಳಿ ತೀರದಲ್ಲಿಯೂ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದ್ದು, ಅನಾಹುತ ತಪ್ಪಿಸಲು ವಿಪತ್ತು ನಿರ್ವಹಣಾ ಪಡೆಗಳು, ಸೇನೆ, ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಹಾನಿಯಾಗಿರುವ ಪ್ರದೇಶಗಳಲ್ಲಿಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಹಾಗೂ ಒಡಿಶಾ ಪೊಲೀಸ್‌ ಇಲಾಖೆ ಆ ಸ್ಥಳದ ಚಿತ್ರಣ ಕಟ್ಟಿಕೊಡವು ಸರಣಿ ಟ್ವೀಟ್‌ಗಳನ್ನು ಪ್ರಕಟಿಸಿವೆ.

‘ಒಡಿಶಾದ ಕಟಕ್‌ ನಗರಕ್ಕೆ ಚಂಡಮಾರುತ ಅಪ್ಪಳಿಸಿದೆ. ರಸ್ತೆ ಬದಿಗಳಲ್ಲಿದ್ದ ಹಲವು ಮರಗಳು ಧರೆಗುರುಳಿವೆ. ಒಡಿಶಾ ಡಿಜಿಪಿ ನಿರ್ದೇಶನದ ಮೇರೆಗೆ, ಕಟಕ್‌ ಡಿಸಿಪಿ ಹಾಗೂ ಒರಿಸ್ಸಾ ವಿಪತ್ತು ನಿರ್ವಹಣೆ ಕ್ಷಿಪ್ರ ಕಾರ್ಯಪಡೆಯ ಮರಗಳ ತೆರವು ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಒಡಿಶಾ ಪೊಲೀಸ್‌ ಟ್ವೀಟ್‌ ಮಾಡಿದೆ.

ಕೇಂದ್ರಪುರ ಎಂಬಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸ್ಥಳೀಯರನ್ನು ಸ್ಥಳಾಂತರಿಸುತ್ತಿರುವ ಸಿಬ್ಬಂದಿ.

ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ.

ಚಂಡಮಾರುತ ಸಂತ್ರಸ್ತರಿಗಾಗಿ ಕರಾವಳಿ ರಕ್ಷಣಾ ಪಡೆಯ ನೌಕೆಯ ಮೂಲಕ ಸಾಗಿಸುತ್ತಿದ್ದ ಆಹಾರ ಪೊಟ್ಟಣ, ಕುಡಿಯುವ ನೀರು ಸೇರಿದಂತೆ ಮತ್ತಿತರ ಪರಿಹಾರ ಸಾಮಾಗ್ರಿಗಳನ್ನು ರಕ್ಷಣಾ ಪಡೆಯ ಹೆಲಿಕಾಪ್ಟರ್‌ಗೆ ತುಂಬಿಸುತ್ತಿರುವುದು.

ಒಡಿಶಾ ರಾಜಧಾನಿ ಭುವನೇಶ್ವರದ ಏಮ್ಸ್‌ ಹಾಸ್ಟೆಲ್‌ನ ಮೇಲ್ಛಾವಣಿ ಚಂಡಮಾರುತಕ್ಕೆ ಸಿಲುಕಿ ಹಾರಿಹೋಯಿತು.

*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.