ADVERTISEMENT

‘ತೌತೆ’ ಚಂಡಮಾರುತ: ಗುಜರಾತ್‌ನಲ್ಲಿ 45 ಮಂದಿ ಸಾವು

ಪಿಟಿಐ
Published 19 ಮೇ 2021, 9:39 IST
Last Updated 19 ಮೇ 2021, 9:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ‘ಗುಜರಾತ್‌ನ 12 ಜಿಲ್ಲೆಗಳಲ್ಲಿ ‘ತೌತೆ’ ಚಂಡಮಾರುತದಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಅಮ್ರೇಲಿ ಜಿಲ್ಲೆಯ ಸೌರಾಷ್ಟ್ರ ಪ್ರದೇಶದಲ್ಲಿ 15 ಮಂದಿ, ಭಾವ್‍ನಗರ ಮತ್ತು ಗಿರ್‌ ಸೋಮನಾಥದಲ್ಲಿ ತಲಾ 8 ಮಂದಿ, ಅಹಮದಾಬಾದ್‌ನಲ್ಲಿ ಐವರು ಮತ್ತು ಕೇದಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆನಂದ್‌, ವಡೋದರಾ,ಸೂರತ್‌, ವಲ್ಸಾಡ್‌, ರಾಜ್‌ಕೋಟ್‌, ನವಸಾರಿ, ಪಂಚಮಹಲ್‌ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಗುಜರಾತ್‌ ತುರ್ತು ಕಾರ್ಯಾಚರಣಾ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

ಕರಾವಳಿಯ ಮೂಲಕ ತೌತೆ ಚಂಡಮಾರುತವು ಸೋಮವಾರ ಮಧ್ಯರಾತ್ರಿ ಗುಜರಾತ್ ಪ್ರವೇಶಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.