ನವದೆಹಲಿ: ಟಿಬೆಟಿಯನ್ ಧರ್ಮಗುರು ದಲೈಲಾಮಾ ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ದಲೈಲಾಮಾ ಕ್ಷಮೆ ಕೇಳಿದ್ದಾರೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಧರ್ಮಗುರುವಿಗೆ ಗೌರವ ಸಲ್ಲಿಸಲು ಬಂದಿದ್ದ ಬಾಲಕನ ತುಟಿಗಳನ್ನು ದಲೈಲಾಮಾ ಚುಂಬಿಸಿದ್ದರು. ನಂತರ ತಮ್ಮ ನಾಲಿಗೆಯನ್ನು ಹೊರ ಚಾಚಿ ಅದನ್ನು ಚೀಪುವಂತೆ ಬಾಲಕನಿಗೆ ಹೇಳಿದ್ದರು. ಈ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣ ಬಳಕೆದಾರರಿಂದ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಧರ್ಮಗುರು ದಲೈಲಾಮಾ ವರ್ತನೆಗೆ ಅವರ ವರ್ತನೆಗೆ ತೀವ್ರ ಆಕ್ಷೇಪ, ಟೀಕೆಗಳು ವ್ಯಕ್ತವಾಗಿದ್ದವು.
ಈ ಘಟನೆ ಬಗ್ಗೆ ದಲೈಲಾಮಾ ಕ್ಷಮೆ ಕೋರಿ ಟ್ವೀಟ್ ಮಾಡಿದ್ದಾರೆ.
ಬಾಲಕ ಮತ್ತು ಅವನ ಕುಟುಂಬಕ್ಕೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಅವರ ಕಚೇರಿಯು ಟ್ವೀಟ್ ಮಾಡಿ ಹೇಳಿಕೆ ನೀಡಿದ್ದು, ‘ದಲೈಲಾಮಾ ಅವರು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಭೇಟಿಯಾಗುವ ಜನರನ್ನು ಆಗಾಗ್ಗೆ ಕೀಟಲೆ ಮಾಡುತ್ತಿರುತ್ತಾರೆ‘ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.