ADVERTISEMENT

ಎರಡು ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ದಲೈ ಲಾಮಾ

ಪಿಟಿಐ
Published 19 ಮಾರ್ಚ್ 2022, 5:39 IST
Last Updated 19 ಮಾರ್ಚ್ 2022, 5:39 IST
ದಲೈ ಲಾಮಾ
ದಲೈ ಲಾಮಾ   

ಧರ್ಮಶಾಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಎರಡಕ್ಕೂ ಹೆಚ್ಚು ವರ್ಷಗಳ ನಂತರ ಬೌದ್ಧ ಧರ್ಮ ಗುರು ದಲೈ ಲಾಮಾ ಮೊದಲ ಬಾರಿಗೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಬಳಿಕ ಪ್ರತಿಕ್ರಿಯಿಸಿರುವ ಅವರು, 'ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು' ಎಂದು ಹೇಳಿದ್ದಾರೆ.

ಬಳಿಕ ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ 'ಜಾತಕ' ಕಥೆಗಳ ಕಿರು ಬೋಧನೆಯನ್ನು ನೀಡಿದರು.

'ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ' ಎಂದು ಹೇಳಿದರು.

ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.